




ಪುತ್ತೂರು:ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆದ ನೂತನ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀದೇವರ ಉಬ್ಬು ಛಾಯ ಬಿಂಬ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಡಿ.9ರಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನದೊಂದಿಗೆ ಸಂಪನ್ನಗೊಂಡಿತು.



ವೇ.ಮೂ ದಿನೇಶ್ ಮರಡಿತ್ತಾಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.7ರಂದು ಬೆಳಗ್ಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮದೊಂದಿಗೆ ಚಾಲನೆ ದೊರೆತು ನಂತರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಶಿವನಾಮ ಸಂಕೀರ್ತನೆಯೊಂದಿಗೆ ದೇವರ ಬೆಳ್ಳಿ ಉಬ್ಬು ಛಾಯಾ ಬಿಂಬದ ಮೆರವಣಿಗೆ ಹೊರಟು, ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ ಬಳಿ ಆಗಮಿಸಿ, ಅಲ್ಲಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯೊಂದಿಗೆ ಹೊರಟು ಭಜನಾ ಮಂದಿರಕ್ಕೆ ಆಗಮನ, ನಂತರ ಉಗ್ರಾಣ ಮುಹೂರ್ತ, ಧ್ವಜಾರೋಹಣ, ಸಂಜೆ ವೈದಿಕರ ಆಗಮನ ವಿವಿಧ ವೈದಿಕ ಹಾಗೂ ತಾಂತ್ರಿಕ ವಿಧಿ ವಿಧಾನಗಳ ನಡೆಯಿತು.





ಡಿ.8ರಿಂದ ಶ್ರೀ ಶಕ್ತಿ ಜಟಾಧಾರಿ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬ ಪ್ರತಿಷ್ಠೆ, ಶಿವಪಂಚಾಕ್ಷರಿ ಹೋಮ, ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ, ಸಭಾ ಕಾರ್ಯಕ್ರಮ ಸಂಜೆ ಏಕಾಹ ಭಜನೆ ಪ್ರಾರಂಭ, ರಾತ್ರಿ ದುರ್ಗಾ ನಮಸ್ಕಾರ ಪೂಜೆ ನೆರವೇರಿತು. ಡಿ.9ರಂದು ಸಂಜೆ ಏಕಾಹ ಭಜನೆ ಮಂಗಳೋತ್ಸವದ ಬಳಿಕ ಚೌಕಿ ಪೂಜೆ ನಡೆದು ನಂತರ ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ರಾತ್ರಿ ಅನ್ನಸಂತರ್ಪಣೆ, ಯಕ್ಷಗಾನ ಮಂಗಳೋತ್ಸವದೊಂದಿಗೆ ಮೂರು ದಿನಗಳ ಕಾಲ ನಡೆದ ಸಂಭ್ರಮದ ಕಾರ್ಯಕ್ರಮಗಳು ತೆರೆಕಂಡಿತು.
ದೇವಸ್ಥಾನ ಮಾದರಿಯಲ್ಲಿ ನಿರ್ಮಾಣ ಗಣ್ಯರ ಮೆಚ್ಚುಗೆ:
ಅಜ್ಜಿಕಲ್ಲು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಭಜನಾ ಮಂದಿರವು ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಇಂತಹ ಭಜನಾ ಮಂದಿರ ಎಲ್ಲಿಯೂ ಇಲ್ಲ ಎಂದು ಅತಿಥಿ, ಅಭ್ಯಾಗತರುಗಳು ಹಾಗೂ ಭಕ್ತಾದಿಗಳು ಮಂದಿರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
8೦೦೦ ಮಂದಿಗೆ ಅನ್ನದಾನ:
ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಿದ್ದು ಸುಮಾರು ೮೦೦೦ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಆಹಾರ ಸಮಿತಿ ಸಂಚಾಲಕ ಪುರಂದರ ರೈ ನಾಲ ಅವರ ನೇತೃತ್ವದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ನಡೆದಿತ್ತು. ಜೊತೆಗೆ ವಿವಿಧ ಉಪ ಸಮಿತಿಗಳ ಮೂಲಕ ಲೋಕಾರ್ಪಣಾ ಕಾರ್ಯಕ್ರಮಗಳೆಲ್ಲವೂ ಬಹಳಷ್ಟು ವ್ಯವಸ್ಥಿತವಾಗಿ ನಡೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಬಿಜೆಪಿ ನಗರ ಮಂಡಲದ ಅದ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಭಜನಾ ಮಂದಿರದ ಲೋಕರ್ಪಣಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ರೈ ಹೊಸಮನೆ, ಗೌರವ ಸಲಹೆಗಾರರಾದ ಡಾ.ರವಿಶಂಕರ್ ಪೆರ್ವಾಜೆ, ಜತ್ತಪ್ಪ ರೈ ಮೊಡಪ್ಪಾಡಿಗುತ್ತು, ಜಗಜೀವನ್ದಾಸ್ ರೈ ಚಿಲ್ಮೆತ್ತಾರು, ಅಧ್ಯಕ್ಷ ಸೀತಾರಾಮ ರೈ ಕೈಕಾರ, ಪ್ರಧಾನ ಕಾರ್ಯದರ್ಶಿ ಮೋಹನ ಕೊಳಕ್ಕೆಗದ್ದೆ, ಕೋಶಾಧಿಕಾರಿ ಸಂದೀಪ್ ರೈ ಚಿಲ್ಮೆತ್ತಾರು, ಆಡಳಿತ ಮಂಡಳಿ ಅಧ್ಯಕ್ಷ ಅಜಿತ್ ರೈ ಹೊಸಮನೆ, ಪ್ರಧಾನ ಕಾರ್ಯದರ್ಶಿ ಸತೀಶ್ ಅಂಚನ್, ಕೋಶಾಧಿಕಾರಿ ಶಶಿರಾಜ್ ರೈ ಚಿಲ್ಮೆತ್ತಾರು, ಭಜನಾ ಮಂದಿರದ ಲೋಕರ್ಪಣಾ ಸಮಿತಿ ಉಪಾಧ್ಯಕ್ಷ ರಮೇಶ್ ರೈ ಮೊಡಪ್ಪಾಡಿ, ಉಪ ಸಮಿತಿಗಳ ಸಂಚಾಲಕರಾದ ಜಗದೀಶ ಶೆಟ್ಟಿ ಹೊಸಮನೆ, ಪುರಂದರ ರೈ ನಾಲ, ಮಹೇಶ್ ಕೇರಿ, ಸಂತೋಷ್ ಕುಮಾರ್ ನಾಲ, ಮನೋಜ್ ಶೆಟ್ಟಿ ನಾಲ, ಪದ್ಮನಾಭ ಪೂಜಾರಿ, ಸಂದೀಪ್ ರೈ ಹೊಸಮನೆ, ಸುಶಾಂತ್ ಅಜ್ಜಿಕಲ್ಲು, ಭಗವಾನ್ದಾಸ್ ರೈ, ಮಂಜುನಾಥ ರೈ ಮೊಡಪ್ಪಾಡಿ, ದಯಾನಂದ ಶೆಟ್ಟಿ ಮೊಡಪ್ಪಾಡಿ, ಶರತ್ ರೈ ಮೊಡಪ್ಪಾಡಿ, ಧನರಾಜ್ ರೈ ಕಾಪಿಕಾಡ್, ಲೋಕೇಶ್ ರೈ ಬೈರೋಡಿ, ಮನೋಜ್ ಗೌಡ ದೇವಸ್ಯ, ಸತೀಶ್ ಕುಮಾರ್ ಅಜ್ಜಿಕಲ್ಲು, ಅಭಿಜಿತ್ ರೈ ಚಿಲ್ಮೆತ್ತಾರು, ಶ್ಯಾಂಜಿತ್ ರೈ ಪಾಪನಡ್ಕ, ಸಂಜೀವ ನಾಯ್ಕ ಮುಂಡೋವುಮೂಲೆ, ಶಶಿಧರ ರೈ ಮೊಡಪ್ಪಾಡಿ, ಮಹೇಶ್ ರೈ ಎಂ ಮೊಡಪ್ಪಾಡಿ, ಪ್ರಕಾಶ್ ಕುಮಾರ್ ಬೈರೋಡಿ, ಪ್ರಕಾಶ್ ರೈ ಹೊಸಮನೆ, ಹರೀಶ್ ರೈ ಹೊಸಮನೆ, ಶ್ರೀಧರ್ ನಾಯ್ಕ ಮುಂಡೋವುಮೂಲೆ, ಈಶ್ವರ ನಾಯ್ಕ ಮುಂಡೋವುಮೂಲೆ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿ, ಕಾರ್ಯಕ್ರಮದ ವೈಭವವನ್ನು ಕಣ್ತುಂಬಿಕೊಂಡರು.
ಮೂರು ದಿನಗಳ ಕಾಲ ಮಂದಿರದಲ್ಲಿ ನಡೆದ ಲೋಕಾರ್ಪಣೆಯ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಕ್ತಿ ಭಾವದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಯೊಬ್ಬರಿಂದಲೂ ನಿರೀಕ್ಷೆಗೂ ಮೀರಿದ ಸಹಕಾರ ದೊರೆತಿದೆ. ಗ್ರಾಮದವರು ಮಾತ್ರವಲ್ಲದೇ ಹೊರ ಭಾಗವದವರೂ ಆಗಮಿಸಿ, ದೇಣಿಗೆ ನೀಡಿ ಸಹಕರಿಸಿದ್ದಾರೆ. ಕಾರ್ಯಕ್ರಮಗಳಿಗೆ ಆಗಮಿಸಿ, ಮಂದಿರದ ಕೆಲಸ ಕಾರ್ಯಗಳಿಗೆ ಮೆಚ್ಚು ದೇಣಿಗೆ ನೀಡಿದ್ದಾರೆ. ಎಲ್ಲಾ ಸ್ವಯಂ ಸೇವಕರ ಅವಿರತ ಶ್ರಮದ ಫಲವಾಗಿ ಅದ್ಬುತ ರೀತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿದ್ದು ಅಜ್ಜಿಕಲ್ಲಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಗಿ ಮುಂದುವರಿಯುವಲ್ಲಿ ನಾಂದಿ ಹಾಡಿದೆ. ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.
-ಸೀತಾರಾಮ ರೈ ಕೈಕಾರ, ಅಧ್ಯಕ್ಷರು ಭಜನಾ ಲೋಕಾರ್ಪಣಾ ಸಮಿತಿ
ಮಂದಿರದ ಲೋಕಾರ್ಪಣ ಸಮಿತಿ, ವಿವಿಧ ಉಪ ಸಮಿತಿಗಳು ಹಾಗೂ ಭಕ್ತಾದಿಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ನಮ್ಮ ನಿರೀಕ್ಷೆಗೂ ಮೀರಿ ಅದ್ಧೂರಿಯಾಗಿ ನಡೆದಿದೆ. ಪುತ್ತೂರು ಆಸು ಪಾಸು ಮಾತ್ರವಲ್ಲದೇ ಬೆಂಗಳೂರಿನಿಂದಲೂ ಅದ್ಬುತ ರೀತಿಯಲ್ಲಿ ಹೊರೆಕಾಣಿಕೆ ಸಮರ್ಪಣೆಗೊಂಡಿದೆ. ಕಾರ್ಯಕ್ರಮದ ಯಶಸ್ಸಿನಲ್ಲಿ ಸ್ವಯಂ ಸೇವೆಕರ ಅವಿರತ ಶ್ರಮವಿದೆ. ಮಂದಿರದಲ್ಲಿ ಮುಂದಿನ ದಿನಗಳಲ್ಲಿ ರೂ.40ಲಕ್ಷದಲ್ಲಿ ಸಭಾಂಗಣ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ದಗೊಂಡಿದೆ. ಇದಕ್ಕೆ ಶಾಸಕರಿಂದ ರೂ.10ಲಕ್ಷ ದೇಣಿಗೆ ಘೋಷಣೆ ಮಾಡಿದ್ದು ಅವರಿಗೆ ಅಭೀನಂದನೆಗಳು. ಅಲ್ಲದೆ ಮಂದಿರದಲ್ಲಿ ದರ್ಮ ಶಿಕ್ಷಣ ಹಾಗೂ ಭಜನೆಗೆ ಬರುವ ಅಜ್ಜಿಕಲ್ಲು ಶಾಲಾ ವಿದ್ಯಾರ್ಥಿಗಳ ಪೂರ್ಣ ವೆಚ್ಚವನ್ನು ಮಂದಿರದಿಂದ ಭರಿಸಲಾಗುವುದು.
ಅಜಿತ್ ರೈ ಹೊಸಮನೆ, ಅಧ್ಯಕ್ಷರು ಆಡಳಿತ ಸಮಿತಿ ಭಜನಾ ಮಂದಿರ









