ಪ್ರವಾದಿ(ಸ.ಅ.)ತಂಙಳ್‌ರವರ ಜೀವನ ಶೈಲಿ ನಮಗೆ ಮಾದರಿಯಾಗಲಿ-ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್
ಪೆರಾಬೆ: ನೂರುಲ್ ಹುದಾ ಅರೇಬಿಕ್ ಮದ್ರಸ ಕೋಚಕಟ್ಟೆ ಇದರ ಆಶ್ರಯದಲ್ಲಿ ಮಿಲಾದ್ ಸಮಾವೇಶ ಹಾಗೂ 2 ದಿವಸಗಳ ಧಾರ್ಮಿಕ ಪ್ರವಚನ ಅ.14 ಮತ್ತು 15ರಂದು ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ.ಯವರ ಅಧ್ಯಕ್ಷತೆಯಲ್ಲಿ ಕೋಚಕಟ್ಟೆ ನೂರುಲ್‌ಹುದಾ ಮದ್ರಸ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ, ಅ.15ರಂದು ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ದು:ವಾಶೀರ್ವಚನ ಮಾಡಿ ಮಾತನಾಡಿದ ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್‌ರವರು, ಪ್ರವಾದಿ(ಸ.ಅ.)ರವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟ ಚಿಂತನೆಗಳಿಂದ ದೂರವಿದ್ದು ಪಾರತ್ರಿಕ ವಿಜಯಕ್ಕೆ ಶ್ರಮಿಸಬೇಕು. ಈ ಜೀವನವು ಕೇವಲ ತಾತ್ಕಾಲಿಕವಾಗಿದ್ದು ನಮ್ಮ ಶಾಶ್ವತ ಜೀವನವು ಮರಣ ನಂತರ ಬರಲಿಕ್ಕಿದೆ. ಆದ್ದರಿಂದ ಎಲ್ಲಾ ದುಶ್ಚಟಗಳಿಂದ ದೂರವಿದ್ದು ಪಾರತ್ರಿಕ ವಿಜಯಕ್ಕಾಗಿ ಶ್ರಮಿಸಬೇಕು ಎಂದರು. ಮದ್ರಸ ಅಧ್ಯಾಪಕರಾದ ಫಾರೂಕ್ ದಾರಿಮಿ ರೆಂಜ ಉದ್ಘಾಟಿಸಿದರು. ಶಮೀರ್ ದಾರಿಮಿ ಕೊಲ್ಲಂ ಮುಖ್ಯಪ್ರಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿದ್ದ ಕಡಬ ರೇಂಜ್ ಜಂಇಯ್ಯತುಲ್ ಮುಹಲ್ಲಿಮೀನ್ ಇದರ ಅಧ್ಯಕ್ಷರಾದ ಇಬ್ರಾಹಿಂ ದಾರಿಮಿ ಕಡಬ ಶುಭಹಾರೈಸಿದರು.
ಕುಂತೂರು ಮಸೀದಿ ಕೋಶಾಧಿಕಾರಿ ಅಬ್ದುಲ್ಲಾ ಕೆ. ಮುಡಪಿನಡ್ಕ, ಜಮಾಅತ್ ಕಾರ್ಯದರ್ಶಿ ಯಾಕೂಬ್ ಕೆ., ಕಡಬ ರೇಂಜ್ ಮೇನೇಜ್‌ಮೆಂಟ್‌ನ ಅಬ್ದುಲ್ ಖಾದರ್ ಹಾಜಿ ಸೀಗಲ್, ಕಡಬ ರೇಂಜ್ ಕೋಶಾಧಿಕಾರಿ ಅಬ್ದುಲ್ಲಾ ಪಿ.ಎ., ನೆಕ್ಕರೆ ಮಸೀದಿ ಅಧ್ಯಕ್ಷರಾಗಿ ಎನ್.ಎಂ.ಮುಹಮ್ಮದ್, ಸುರುಳಿ ಮಸೀದಿ ಅಧ್ಯಕ್ಷರಾದ ಅಲಿಕುಂಞಿ, ಸುರುಳಿ ಮಸೀದಿ ಇಮಾಂ ಶೌಕತ್ತಲಿ ಅಸ್ಲಮಿ, ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ಅಧ್ಯಕ್ಷ ಮುಹಮ್ಮದ್ ಆಲಿ ಕೋಚಕಟ್ಟೆ, ಅಶ್ರಫ್ ಮುಸ್ಲಿಯಾರ್ ಕೋಲ್ಪೆ, ಇಸ್ಮಾಯಿಲ್ ಅಲ್‌ಅಮೀನ್, ಹಾಪಿಳ್ ಸಫ್ವಾನ್ ಅನ್ಸಾರಿ, ಮದ್ರಸದ ಮಾಜಿ ಸದರ್ ಉಸ್ತಾದ್ ಅಬ್ದುಲ್ ಅಝೀಝ್ ಮುಸ್ಲಿಯಾರ್, ಕೋಲ್ಪೆ ಮುದರ್ರಿಸ್ ಶರೀಫ್ ದಾರಿಮಿ ಅಲ್ ಐತಮಿ, ಆಶೀಫ್ ಫೈಝಿ, ನೆಕ್ಕರೆ ಮಸೀದಿ ಮಾಜಿ ಅಧ್ಯಕ್ಷರಾದ ಅಝಾದ್ ನೆಕ್ಕರೆ, ಕುಂತೂರು ಮದ್ರಸದ ಸದರ್ ಉಸ್ತಾದ್ ಎಂ.ಎ.ಹನೀಫ್ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ಅರ್ಶದಿ, ಹಸೈನಾರ್ ಮುಸ್ಲಿಯಾರ್ ಬೇಲ್ಪಾಡಿ, ಪೆರಾಬೆ ಗ್ರಾ.ಪಂ.ಸದಸ್ಯ ಫಝಾಯ್ ಝೆಡ್‌ಬಿ, ಅಹ್ಮದ್ ಹಾಜಿ ಅಜ್ಮೀರ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಸನ್ಮಾನ:
ಮದ್ರಸ ಅಧ್ಯಕ್ಷರಾಗಿ, ಕುಂತೂರು ಬೇಳ್ಪಾಡಿ ಮಸೀದಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಬ್ಬಾಸ್ ಕಟ್ಲೇರಿಯವರನ್ನು ಮದ್ರಸ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹನೀಫ್ ದಾರಿಮಿ ಸ್ವಾಗತಿಸಿದರು. ಮದ್ರಸ ವಿದ್ಯಾರ್ಥಿ ಅಶೀರ್ ಕೆ.ಎ.ಕೋಚಕಟ್ಟೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಮಾಡಲಾಯಿತು.
ಅ.೧೪ರಂದು ಮಕ್ಕಳ ಪ್ರತಿಭಾ ಕಾರ್ಯಕ್ರಮ, ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್ ಹಾಗೂ ಮೊಯಿದು ಫೈಝಿ ಉಸ್ತಾದರಿಂದ ಮುಖ್ಯ ಪ್ರಭಾಷಣ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಶಿಕ್ಷಕರಾದ ಇಮ್ತಿಯಾಜ್ ಸಿ.ಎಂ.ಸ್ವಾಗತಿಸಿದರು.