ಪುತ್ತೂರು: ಭಾರಿ ಸಿಡಿಲು- ಆ್ಯಡ್ ಲ್ಯಾಬ್ ನಲ್ಲಿ ಶಾರ್ಟ್ ಸರ್ಕ್ಯೂಟ್, ಕಂಪ್ಯೂಟರ್ ಸಹಿತ ಹಲವು ಉಪಕರಣಗಳು ಬೆಂಕಿಗಾಹುತಿ

0

ಪುತ್ತೂರು: ಸಂಜೆಯ ಭಾರಿ ಗುಡುಗು ಸಹಿತ ಮಳೆಗೆ ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಜಿ.ಎಲ್ ಕಾಂಪ್ಲೆಕ್ಸ್ ನಲ್ಲಿರುವ ಆ್ಯಡ್ ಲ್ಯಾಬ್ ಗೆ ಶಾರ್ಟ್ ಸಕ್ಯೂಟ್ ನಿಂದಾಗಿ ಬೆಂಕಿ ತಗುಲಿರುವ ಘಟನೆ ಅ.17ರಂದು ನಡೆದಿದೆ.


ಜಿ.ಎಲ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿರುವ ಫೋಟೋ ಪ್ರಿಂಟ್ ನ ಆ್ಯಡ್ ಲ್ಯಾಬ್ ನಲ್ಲಿ ಸಂಜೆ ಸಂಭವಿಸಿದ ಭಾರಿ ಗುಡುಗಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿ ಕಂಪ್ಯೂಟರ್, ಪೀಠೋಪಕರಣಗಳು ಸಹಿತ ಹಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ‌ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನಷ್ಟದ ಪ್ರಮಾಣ ತಿಳಿದುಬಂದಿಲ್ಲ

LEAVE A REPLY

Please enter your comment!
Please enter your name here