ಪಲ್ಲತ್ತಡ್ಕ  ಹೊಸಮ್ಮ ‌ದೈವಸ್ಥಾನದಲ್ಲಿ ತುಲಾ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ

0

ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಅ17ರಂದು ತುಲಾ ಸಂಕ್ರಮಣ  ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವರ್ಷದಲ್ಲಿ ಎರಡು ದಿವಸ ನಡೆಯುವ ತುಲಾಭಾರ ಸೇವೆಯು ಇಂದು ನಡೆಯಿತು. ನೂರಾರು ಭಕ್ತಾಧಿಗಳು ಪಾಲ್ಗೊಂಡು,ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅದ್ಯಕ್ಷ ಎಸ್.ಬಿ.ಜಯರಾಮರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here