





ಪುತ್ತೂರು: ಆರ್ಯಾಪು ಗ್ರಾಮ ನೀರ್ಕಜೆ ತರವಾಡು ಮನೆ ಶ್ರೀ ನಾಗದೇವರು, ಧರ್ಮದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಅ.22ರಂದು ಬೆಳಿಗ್ಗೆ 6ರಿಂದ ಶ್ರೀ ಮಹಾಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಹೋಮ, ಆಯುಧ ಪೂಜೆ ನಡೆಯಲಿದೆ. ಬಾಲಕೃಷ್ಣ ಆಚಾರ್ಯ ಕಾರಿಂಜರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
















