ಪುತ್ತೂರು: ಪುರುಷರಕಟ್ಟೆಯ ಸಿದ್ದಣ್ಣ ಕಾಂಪ್ಲೆಕ್ಸ್‌ನಲ್ಲಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ತಿಂಗಳ ಪ್ರತಿ ಶನಿವಾರ ಮನೋರೋಗ ತಜ್ಙರು ಮತ್ತು ಕೌನ್ಸಿಲರ್ ಡಾ.ಅಕ್ಷತಾ ಸಿ.ಜೆ. ಚಿಕಿತ್ಸೆಗೆ ಲಭ್ಯವಿದ್ದು ಅ.21ರಂದು ಲಭ್ಯವಿದ್ದಾರೆ. ಪ್ರತಿ ಆದಿತ್ಯವಾರ ಖ್ಯಾತ ಮಕ್ಕಳ ತಜ್ಞ ಡಾ. ಸಂದೀಪ್ ಎಚ್.ಎಸ್ ಹಾಗೂ ಫಿಶಿಷಿಯನ್ ಹಾಗೂ ಮಧುಮೇಹ ತಜ್ಞೆ ಡಾ.ಅನನ್ಯಲಕ್ಷ್ಮೀ ಸಂದೀಪ್ ಚಿಕಿತ್ಸೆಗೆ ಲಭ್ಯವಿದ್ದು ಅ.22ರಂದು ಲಭ್ಯವಿದ್ದಾರೆ.
ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜು ಆಸ್ಪತೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮನೋರೋಗ ತಜ್ಷರು ಮತ್ತು ಕೌನ್ಸಿಲರ್ ಡಾ.ಅಕ್ಷತಾ ಸಿ.ಜೆ.ಯವರು ಪ್ರತಿ ಶನಿವಾರ ಅಪರಾಹ್ನ ಗಂಟೆ 2.30ರಿಂದ 5ರ ತನಕ ಲಭ್ಯವಿದ್ದು ಕೌನ್ಸಿಲಿಂಗ್, ಪರೀಕ್ಷ ಭಯ ನಿವಾರಣೆ, ಒತ್ತಡ ನಿರ್ವಹಣೆ, ಖಿನ್ನತೆ, ಆತಂಕ ಹಾಗೂ ಕ್ಯರೀಯರ್ ಕೌನ್ಸಿಲಿಂಗ್ ಹಾಗೂ ಸಲಹೆಗಳನ್ನು ನೀಡಲಿದ್ದಾರೆ.
ಪ್ರತಿ ಆದಿತ್ಯವಾರ ಖ್ಯಾತ ಮಕ್ಕಳ ತಜ್ಞ ಡಾ. ಸಂದೀಪ್ ಎಚ್.ಎಸ್ ಹಾಗೂ ಎಂ.ಡಿ ಪ್ಯಾರಾ ಕ್ಲಿನಿಕಲ್ ವಿಷಯದಲ್ಲಿ ಚಿನ್ನದ ಪದಕ ಹಾಗೂ ಪ್ರಥಮ ರ‍್ಯಾಂಕ್ ಪಡೆದಿರುವ ಫಿಶಿಷಿಯನ್ ಹಾಗೂ ಮಧುಮೇಹ ತಜ್ಞೆ ಡಾ.ಅನನ್ಯಲಕ್ಷ್ಮೀ ಸಂದೀಪ್ ಚಿಕಿತ್ಸೆಗೆ ಲಭ್ಯವಿದ್ದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಚಿಕಿತ್ಸೆ ಲಭ್ಯವಿದ್ದಾರೆ. ಇವರಿಬ್ಬರು ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಕಕ್ಕಿಂಜೆಯಲ್ಲಿ ಆಸ್ಪತ್ರೆಯನ್ನು ಮುನ್ನಡೆಸುತ್ತಿರುವ ಇವರು ಉಜಿರೆಯಲ್ಲಿ ಮಕ್ಕಳ ಚಿಕಿತ್ಸಾಲಯವನ್ನು ಹೊಂದಿರುತ್ತಾರೆ. ಡಾ.ಸಂದೀಪ್‌ರವರು ಮಕ್ಕಳ ಎಲ್ಲಾ ರೀತಿಯ ವ್ಯಾದಿಗಳಿಗೆ ತಪಾಸಣೆ, ಚಿಕಿತ್ಸೆ, ವ್ಯಾಕ್ಸಿನೇಷನ್ ಸೌಲಭ್ಯಗಳು ಹಾಗೂ ಸಲಹೆಗಳನ್ನು ನೀಡಲಿದ್ದಾರೆ. ಡಾ.ಅನನ್ಯಲಕ್ಷ್ಮೀ ಸಂದೀಪ್‌ರವರು ಜನರಲ್ ಫಿಶಿಷಿಯನ್ ಹಾಗೂ ಮಧುಮೇಹ ಖಾಯಿಲೆಗಳಿಗೆ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಲಿದ್ದಾರೆ. ಮುಂಗಡ ಬುಕ್ಕಿಂಗ್‌ಗಾಗಿ ಮೊಬೈಲ್ 9036156242, 9035040352 ನಂಬರ್‌ನ್ನು ಸಂಪರ್ಕಿಸುವಂತೆ ಡಾ.ಸುಜಯ್‌ಕೃಷ್ಣ ತಂತ್ರಿ ತಿಳಿಸಿದ್ದಾರೆ.