





ಕಡಬ: ಇಲ್ಲಿನ ಕೊರಮಡುಮ್ ಟವರ್‌ನಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಈಶ ಎಂಟರ್‌ಪ್ರೈಸಸ್ ಅ.20ರಂದು ಶುಭಾರಂಭಗೊಂಡಿತು.
ಪೂರ್ವಾಹ್ನ ಗಣಹೋಮ ನಡೆಯಿತು, ಬಳಿಕ ನೋಟರಿ ನ್ಯಾಯವಾದಿ ಮನೋಹರ್ ಸಬಳೂರು ಅವರು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸದಾನಂದ ಗೌಡ ಸಾಂತ್ಯಡ್ಕ, ಆನಂದ ಗೌಡ ಕೋಲ್ಪೆ, ನಿತಿನ್ ಕೋಡಿಂಬಾಳ ಬಾಲಕೃಷ್ಣ ಗೌಡ ಪರ್ಲ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಪ್ರಮೋದ್ ಕುಮಾರ್ ಕೆ. ಅವರು ಮಾರಾಟ ಮತ್ತು ಸೇವೆಯ ಬಗ್ಗೆ ಮಾಹಿತಿ ನೀಡಿ, ನಮ್ಮಲ್ಲಿ ನುರಿತ ಸಿಬ್ಬಂದಿಯಿಂದ ಸಲಹೆ ಮತ್ತು ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಿಕೊಡಲಾಗುವುದು, ಕೃಷಿ ಯಂತ್ರೋಪಕರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳು ಲಭ್ಯವಿದೆ. ಅಲ್ಲದೆ ಕೃಷಿ ಮಾಸಾಚರಣೆಯ ಪ್ರಯುಕ್ತ ಒಂದು ತಿಂಗಳು ಯಂತ್ರಗಳ ಉಚಿತ ಸರ್ವೀಸ್ ನೀಡುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದಕೊಳ್ಳಬೇಕೆಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ಅಡಿಕೆ ಮರ ಹತ್ತುವ ಯಂತ್ರದ ಪ್ರಾತ್ಯಕ್ಷಿಕೆ ನೀಡಲಾಯಿತು. ಸಂಸ್ಥೆಯ ಮಾಲಕ ಪ್ರಮೋದ್ ಕುಮಾರ್ ಅವರ ಪತ್ನಿ ಬೃಂದಾ ವಿ. ಪುತ್ರ ಪ್ರಭಾಂಶ್ ಈಶವಾಸ್ಯಂ ಕೋಲ್ಪೆ, ನಿವೃತ್ತ ಶಿಕ್ಷಕಿ ಶ್ರೀಮತಿ ರೇವತಿ.ಪಿ, ರಕ್ಷಿತ್ ವಾಲ್ತಾಜೆ, ಗಾಯತ್ರಿ ಅತಿಥಿಗಳನ್ನು ಸ್ವಾಗತಿಸಿದರು.










