ಶ್ರೀರಾಮಕುಂಜೇಶ್ವರ ಪ.ಪೂರ್ವ ಕಾಲೇಜಿನ ಎನ್‌ ಎಸ್‌ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

0

ಪುತ್ತೂರು:ನೆಲ್ಯಾಡಿ ಶ್ರೀರಾಮ ಪ್ರೌಢ ಶಾಲೆ ಸೂರ್ಯನಗರದಲ್ಲಿ ಅ 14 ರಿಂದ 20ರವರೆಗೆ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ನಡೆದು ಅದರ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮತ್ತು ಶಿಬಿರದ ನಿರ್ದೇಶಕ ಚಂದ್ರಶೇಖರ್ ಕೆ ಮಾತನಾಡಿ”ಯುವಜನರು ತುಂಬಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದಾಗ ರಾಷ್ಟ್ರ ಕಟ್ಟುವ ಕೆಲಸವನ್ನು ಮಾಡುತ್ತಾ ಸಮಾಜಮುಖಿಯಾಗಿ ಬೆಳೆಯುತ್ತಾರೆ. ಈ ಶಿಕ್ಷಣ, ಮಾರ್ಗದರ್ಶನ ಅವರಿಗೆ ಇಂತಹ ಶಿಬಿರಗಳಲ್ಲಿ ಖಂಡಿತವಾಗಿಯೂ ಸಿಗುತ್ತದೆ ಎಂದರು.

ಅತಿಥಿಗಳಾದ ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ ಇದರ ಅಧ್ಯಕ್ಷ ಡಾಕ್ಟರ್ ಸದಾನಂದ ಕುಂದರ್, ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಪಿಲವೂರ್, ಶ್ರೀರಾಮ ಶಾಲೆಯ ಆಡಳಿತ ಸಮಿತಿ ಸದಸ್ಯ ರವಿಚಂದ್ರ ಹೊಸವೊಕ್ಲು, ಸಾಮಾಜಿಕ ಕಾರ್ಯಕರ್ತ ಜಯಾನಂದ ಬಂಟ್ರಿಯಾಲ್, ಶ್ರೀರಾಮ ಶಾಲೆಯ ಮುಖ್ಯಸ್ಥ ಮತ್ತು ಜ್ಯೋತಿಷಿ ಶ್ರೀಧರ್ ಗೋರೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಇದರ ಸದಸ್ಯ ಲಕ್ಷ್ಮೀನಾರಾಯಣರಾವ್ ಅತೂರ್ ಮಾತನಾಡಿ”ರಾಷ್ಟ್ರೀಯ ಸೇವಾ ಯೋಜನೆಯ ಈ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಸುಮಾರು ಏಳು ದಿವಸಗಳ ಕಾಲ ಮನೆಯನ್ನ, ತಮ್ಮ ತಂದೆ ತಾಯಿಯರನ್ನ, ಮೊಬೈಲನ್ನು ಅಥವಾ ಇನ್ನಿತರ ಸೌಕರ್ಯಗಳನ್ನ ಬಿಟ್ಟು ಹೊಸ ವ್ಯವಸ್ಥೆಗೆ ಒಗ್ಗಿಕೊಂಡು ಇರಬೇಕಾಗುತ್ತದೆ. ಶಿಬಿರಾರ್ಥಿಗಳಿಗೆ ಇದು ಸ್ವಲ್ಪ ಕಷ್ಟವಾಗಬಹುದು ಆದರೆ ಅದು ಅನೇಕ ತರದ ಜೀವನ ಕೌಶಲಗಳನ್ನು ಅವರಲ್ಲಿ ಬೆಳೆಸುತ್ತದೆ ಎಂದರು.

ಶಿಬಿರಾರ್ಥಿಗಳಾದ ಸಮೀಕ್ಷಾ ಮತ್ತು ಧನರಾಜ್ ಶಿಬಿರದ ಕುರಿತು ಅನಿಸಿಕೆ-ಅನುಭವಗಳನ್ನು ಹಂಚಿಕೊಂಡರು.ಶಿಬಿರಾಧಿಕಾರಿ ತಿಲಕಾಕ್ಷ ಶಿಬಿರದ ವರದಿಯನ್ನ ವಾಚಿಸಿದರು. ಶಿಬಿರಾರ್ಥಿಗಳಿಗೆ ಶಾಲೆಯ ನಿವೃತ್ತ ಶಿಕ್ಷಕ ದುರ್ಗಪ್ಪ ಮಾವಿನ ಗಿಡಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಅತ್ಯುತ್ತಮ ಶಿಬಿರಾರ್ಥಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಲಯದ ಮುಖ್ಯಸ್ಥ ಸುಬ್ರಾಯ ಪುಣಚ, ಶಾಲೆಯ ಮುಖ್ಯ ಗುರು ಗಣೇಶ ವಾಗ್ಲೆ ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕಿ ಸ್ವಾತಿ ಸ್ವಾಗತಿಸಿ, ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ವಿನಿಲ್ ಡಿಸೋಜಾ ವಂದಿಸಿ, ಸಹ ಯೋಜನಾಧಿಕಾರಿ ಕೀರ್ತನ್ ಡಿಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here