ಕುಕ್ಕಾಜೆ ಶ್ರೀ ಕಾಳಿಕಾಂಭ ಆಂಜನೇಯ ಕ್ಷೇತ್ರದಲ್ಲಿ ಗಡಿನಾಡ ಕವಿ ಭಾವಸಂಗಮ

0

ಸಮಾಜದ ಒಳಿತು ಕೆಡುಕುಗಳ ಮೇಲೆ ಸಾಹಿತ್ಯ ಅಗಾಧ ಪರಿಣಾಮ ಬೀರುತ್ತದೆ: ಶ್ರೀ ಶ್ರೀಕೃಷ್ಣ ಗುರೂಜಿ

ಶ್ರದ್ಧಾಕೇಂದ್ರಗಳಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಾಗ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಸಾಧ್ಯ:ಬಾಲಕೃಷ್ಣ ಬೇರಿಕೆ

ವಿಟ್ಲ: ಸಮಾಜದ ಒಳಿತು ಕೆಡುಕುಗಳ ಮೇಲೆ ಸಾಹಿತ್ಯ ಅಗಾಧ ಪರಿಣಾಮ ಬೀರುತ್ತದೆ. ಉತ್ತಮ ಸಾಹಿತ್ಯ ಸಾರ್ವಕಾಲಿಕವಾಗಿ ಜನಮಾನಸದಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದತ್ತ ಚಿತ್ತ ಹರಿಸಬೇಕೆಂದು ಕುಕ್ಕಾಜೆ ಶ್ರೀ ಕಾಳಿಕಾಂಭ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಹೇಳಿದರು.
ಅವರು ಕುಕ್ಕಾಜೆ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಗಡಿನಾಡ ಕವಿ ಭಾವಸಂಗಮ ಕವಿಗೋಷ್ಠಿ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಾಲಕೃಷ್ಣ ಬೇರಿಕೆರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಿರಂತರ ಪರಿಶ್ರಮ, ಆಸಕ್ತಿ, ಅಧ್ಯಯನ, ಮಹಾನ್ ಕವಿಗಳ ಸಾಹಿತ್ಯ ಮಂಥನ ಭವಿಷ್ಯದ ಸಾಹಿತಿಗಳಿಗೆ ಪ್ರೇರಕವಾಗಿದೆ. ಶ್ರದ್ಧಾಕೇಂದ್ರಗಳಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಾಗ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಸಾಧ್ಯವಿದೆ ಎಂದರು.

ನಾರಾಯಣ ನಾಯ್ಕ ಗೋಳಿಯಡ್ಕ, ವಿಷ್ಣುಗುಪ್ತ ಪುಣಚ, ವನಜಾಕ್ಷಿ ಬಾಳೆಕಾನ, ಸುಶ್ಮಿತಾ ಕುಕ್ಕಾಜೆ, ದೀಕ್ಷಿತ್ ಮಾಣಿಲ, ಅನುರಾಧ ಪಳನೀರು, ನವ್ಯಶ್ರೀ ಕಾಮಜಾಲು ಕವನ ವಾಚಿಸಿದರು.
ಯುವ ಸಾಹಿತಿ ಉದಯ ಭಾಸ್ಕರ್ ಸುಳ್ಯ, ಕವಯತ್ರಿ ಸುಜಾತ ಮಾಣಿಮೂಲೆ ಕವನಗಳ ವಿಮರ್ಶೆ ನಡೆಸಿದರು.
ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರದ ಶ್ರೀಧರ ಬಾಳೆಕಲ್ಲುರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಹಿರಿಯ ಸಾಹಿತಿ ಸುಂದರ ಬಾರಡ್ಕ ಭಾಗವಹಿಸಿದ್ದರು.
ದೇವಿಪ್ರಸಾದ್ ಕುಕ್ಕಾಜೆ ಸ್ವಾಗತಿಸಿದರು. ರವಿ ಎಸ್.ಎಂ ವಂದಿಸಿದರು.ಸಾಹಿತಿ ಜಯ ಮಣಿಂಯಪಾರೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here