





ಪುತ್ತೂರು: 90 ಲಕ್ಷ ರೂ.ಸಾಲ ಪಡೆದುಕೊಂಡು ಪೂರ್ಣ ಹಣ ಹಿಂತಿರುಗಿಸದೇ ವಂಚನೆ ಮಾಡಿರುವುದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಬನ್ನೂರು ನಿವಾಸಿ ಶೇಖರ ಎನ್.ಪಿ.ಎಂಬವರು ನೀಡಿದ ದೂರಿನ ಮೇರೆಗೆ ವಿಜಯನಗರದ ಜಿಲ್ಲೆಯ ಶಿವಮೂರ್ತಿ, ಪುತ್ತೂರಿನ ಶ್ಯಾಮ್ಸುದರ್ಶನ ಭಟ್ ಹಾಗೂ ನವೀನ್ ರೈ ಕೈಕಾರ ಎಂಬವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಅ.22ರಂದು ಕೇಸು ದಾಖಲಾಗಿದೆ.


2022ನೇ -ಬ್ರವರಿ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನ ಹಣಸಿ ಗ್ರಾಮದ ಶಿವಮೂರ್ತಿ ಎಂಬವರು ಹೊಯಿಗೆ ವ್ಯವಹಾರಕ್ಕಾಗಿ 90 ಲಕ್ಷ ರೂ.,ಸಾಲವಾಗಿ ಪಡೆದುಕೊಂಡು 1 ವರ್ಷದಲ್ಲಿ ಲಾಭಾಂಶ ಸಮೇತ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಆ ಬಳಿಕ ಶಿವಮೂರ್ತಿಯವರು ಚೆಕ್ ನಂಬ್ರ 614931, 614932, 614930ರಲ್ಲಿ ಕ್ರಮವಾಗಿ ರೂ.25 ಲಕ್ಷ, 15 ಲಕ್ಷ ಹಾಗೂ 50 ಲಕ್ಷ ಎಂದು ಬರೆದುಕೊಟ್ಟಿದ್ದರು. ಸದ್ರಿ ಚೆಕನ್ನು ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ ಬ್ಯಾಂಕಿನಿಂದ ಸದ್ರಿ ಚೆಕ್ಗಳು ತಿರಸ್ಕೃತಗೊಂಡಿದ್ದು ಸಾಲದ ಹಣವನ್ನು ಶಿವಮೂರ್ತಿಯವರಲ್ಲಿ ಕೇಳಿದಾಗ 6-2-2023ರಂದು ರೂ.2 ಲಕ್ಷ, 8-2-2023ರಂದು ರೂ.5 ಲಕ್ಷ, 4-3-2023ರಂದು ರೂ.7.50 ಲಕ್ಷ, 13-2-2023ರಂದು ರೂ.9 ಲಕ್ಷ ವಾಪಾಸು ನೀಡಿದ್ದಾರೆ. ಉಳಿದ ರೂ.56.50 ಲಕ್ಷವನ್ನು ಸ್ವಲ್ಪ ಸಮಯದ ನಂತರ ಹಿಂತಿರುಗಿಸುವುದಾಗಿ ನಂಬಿಸಿದ್ದು ಕೆಲ ದಿನಗಳ ಬಳಿಕ ಹಣವನ್ನು ವಾಪಾಸ್ಸು ನೀಡದೇ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ನನಗೆ ಬರಬೇಕಾಗಿದ್ದ ಹಣದಲ್ಲಿ ರೂ.20 ಲಕ್ಷವನ್ನು ಪುತ್ತೂರಿನ ಕಹಳೆ ನ್ಯೂಸ್ ಚಾನೆಲ್ನ ಶ್ಯಾಮ್ ಸುದರ್ಶನ ಭಟ್ ಮತ್ತು ನವೀನ್ ರೈ ಕೈಕಾರ ಎಂಬವರಿಗೆ ನೀಡಿದ್ದು ಅವರಿಂದ ಪಡೆದುಕೊಳ್ಳಿ ಎಂಬುದಾಗಿ ತಿಳಿಸಿದ್ದಾರೆ.





16-10-2023ರಂದು ನಾನು ಮನೆಯಲ್ಲೇ ಇರುವಾಗ 9902600263 ನಂಬ್ರದಿಂದ ಕರೆ ಮಾಡಿ ’ ನಿನಗೆ ಹಣವನ್ನು ಕೊಡುವುದಿಲ್ಲ ಎಂದು ಹೇಳಿ ಅವಾಚ್ಯ ಶಬ್ದದಿಂದ ಬೈಯ್ದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶೇಖರ ಎನ್.ಪಿ.ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಸಾಲವಾಗಿ ಪಡೆದ ಹಣವನ್ನು ವಾಪಸ್ಸು ನೀಡದೇ ಜೀವಬೆದರಿಕೆ ಹಾಕಿ ಮೋಸ ಮಾಡಿರುತ್ತಾರೆ ಎಂದು ಆರೋಪಿಸಿ ಶೇಖರ ಎನ್.ಪಿ.ಅವರು ನೀಡಿದ ದೂರಿನ ಮೇರೆಗೆ ಶಿವಮೂರ್ತಿ, ಶ್ಯಾಮ್ಸುದರ್ಶನ ಭಟ್ ಹಾಗೂ ನವೀನ್ ರೈ ಕೈಕಾರ ಎಂಬವರ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









