ಅ. 24: ಆರ್ಲಪದವು 34ನೇ ವರ್ಷದ ಶಾರದೋತ್ಸವ

0

ಪಾಣಾಜೆ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಇದರ ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ. 24 ರಂದು ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.


ಬೆಳಿಗ್ಗೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಶ್ರೀಕೃಷ್ಣ ಭಟ್‌ ಬಟ್ಯಮೂಲೆಯವರಿಂದ ಪೂಜಾ ವಿಧಾನಗಳು, ಗಣಹೋಮ, ಭಜನೆ, ಅಕ್ಷರಾಭ್ಯಾಸ, ಆಯುಧ ಪೂಜೆ ನಡೆಯಲಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಇಲ್ಲಿನ ವಿದ್ಯಾರ್ಥಿಗಳಿಂದ ʻಪುಣ್ಯಭೂಮಿ ಭಾರತʼ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ. ಮಧ್ಯಾಹ್ನ ಕಲಾರತ್ನ ಶಂಕರನಾರಾಯಣ ಅಡಿಗ ಕುಂಬ್ಲೆಯವರ ಶಿಷ್ಯ ಆಪ್ತಚಂದ್ರಮತಿ ಮುಳಿಯ ಹರಿಕಥೆ ನಡೆಸಿಕೊಡಲಿದ್ದಾರೆ. ಅಪರಾಹ್ನ ಅಮ್ಮ ಕಲಾವಿದೆರ್‌ ಕುಡ್ಲ ಅಭಿನಯದ ʻಅಮ್ಮೆರ್‌ʼ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ ಮಹಾಪೂಜೆಯಾಗಿ ಶೋಭಾಯಾತ್ರೆ ನಡೆಯಲಿದೆ. ಸಿಂಗಾರಿ ಮೇಳ ಮತ್ತು ಸುಡುಮದ್ದು ಪ್ರದರ್ಶನ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here