ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲುರವರ ಪ್ರದೇಶಾಭಿವೃದ್ಧಿ ನಿಧಿಯ ರೂ.10 ಲಕ್ಷ ಅನುದಾನದಲ್ಲಿ ದರ್ಬೆ ಗೂಡ್ಸ್ ವಾಹನ ಚಾಲಕ-ಮ್ಹಾಲಕ ಸಂಘದ ಕಚೇರಿ, ಗೂಡ್ಸ್ ವಾಹನ ಪಾರ್ಕಿಂಗ್, ಛಾವಣಿ ಹಾಗೂ ಶೌಚಾಲಯದ ಉದ್ಘಾಟನೆಯು ಅ.24ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ದರ್ಬೆ ಗೂಡ್ಸ್ ವಾಹನ ಚಾಲಕ- ಮ್ಹಾಲಕ ಸಂಘದ ಮನವಿಯಂತೆ ಸಂಸದ ನಳಿನ್ ಕುಮಾರ್ ಕಟೀಲು ಅನುದಾನ ಮಂಜೂರುಗೊಳಿಸಿದ್ದು ಸುಸಜ್ಜಿತವಾದ ಗೂಡ್ಸ್ ವಾಹನ ಪಾರ್ಕಿಂಗ್, ಸಂಘದ ಕಚೇರಿ, ಶೌಚಾಲಯಗಳು ನಿರ್ಮಾಣಗೊಂಡಿದೆ. ನೂತನ ಕಚೇರಿ ಹಾಗೂ ಪಾರ್ಕಿಂಗ್ ನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.