ಕೆಯ್ಯೂರು ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಸಮರೋಪ ಸಮಾರಂಭ 

0

ತಂದೆ, ತಾಯಿಯ ಪ್ರೀತಿಯ ಸೇವೆ ಮಾಡಿದರೆ, ದೇವರ ಅನುಗ್ರಹ ಸದಾ ಸಿಗುತ್ತದೆ – ಅಶೋಕ್ ಕುಮಾರ್ ರೈ

ಕೆಯ್ಯೂರು: ಶ್ರೀ ಕ್ಷೇತ್ರ  ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರಿನಲ್ಲಿ ನವರಾತ್ರಿ ಮಹೋತ್ಸವದ ಸಮರೋಪ ಸಮಾರಂಭ ಕಾರ್ಯಕ್ರಮವು ಅ.23ರಂದು ದೇವಳದ ವಠಾರದ ಶ್ರೀ ದುರ್ಗಾ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ಮನುಷ್ಯನ ನಿಜವಾದ ಧರ್ಮವಾಗಿದೆ. ನಮ್ಮ ಧರ್ಮವನ್ನು ಗೌರವಿಸಿ ಇತರೆ ಧರ್ಮವನ್ನು ಗೌರವಿಸುವ ಕೆಲಸ ಆದರೆ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯವಾಗುತ್ತದೆ. ಊರಿನವರ ನೇತೃತ್ಬದಲ್ಲಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತದೆ, ಈ ಕಾರಣಕ್ಕೆ ಧರ್ಮ ಉಳಿಯುತ್ತದೆ. ದೇವರಿದ್ದಾನೆ ಎಂಬುದಕ್ಕೆ ಪ್ರಕೃತಿಯೇ ಸಾಕ್ಷಿಯಾಗಿದೆ. ದೇವರು ಎಲ್ಲಾ ಮನುಷ್ಯರನ್ನು ಒಂದೇ ರೀತಿ ಸೃಷ್ಟಿ ಮಾಡಿದ್ದಾನೆ. ನಮ್ಮ ತಂದೆ ತಾಯಿಯೇ ಮೊದಲ ದೇವರು. ತಂದೆ ತಾಯಿ ಆಶೀರ್ವಾದ ಇದ್ದವರಿಗೆ ಮಾತ್ರ ದೇವರ ಅನುಗ್ರಹ ದೊರೆಯುತ್ತದೆ. ಸತ್ತ ಬಳಿಕ ಹೆತ್ತವರನ್ನು ಪ್ರೀತಿಸುವ ನಾವು ಅವರು ಬದುಕಿರುವಾಗ ಅವರನ್ನು‌ನಿರ್ಲಕ್ಷ್ಯ ಮಾಡುತ್ತೇವೆ ಇದು ಸಲ್ಲದು ಎಂದು ಹೇಳಿದರು. ನೀವು ನಿಮ್ಮ ಹೆತ್ತವರನ್ನು ಗೌರವಿಸಿದರೆ ಮಾತ್ರ ನಿಮ್ಮ‌ಮಕ್ಕಳು ನಿಮ್ಮನ್ನು ಗೌರವಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.  ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೆಯ್ಯೂರು ಗ್ರಾಮ ಪಂಚಾಯತ್ ಅದ್ಯಕ್ಷ ಶರತ್ ಕುಮಾರ್ ವಹಿಸಿ ಶಿಷ್ಟರ ರಕ್ಷಣೆ ಮಾಡಿ, ದುಷ್ಟರನ್ನು ಶಿಕ್ಷಸಿಸುವ ಮೂಲಕ ಒಳ್ಳೆಯ ವ್ಯಕ್ತಿಯಾನ್ನಾಗಿ ರೂಪು ಗೊಳ್ಳುವುದೇ ನವರಾತ್ರಿಯ ವಿಶೇಷವಾಗಿದೆ. ಮನುಷ್ಯನಲ್ಲಿರುವ ಅಸೂಯೆ, ರಾಕ್ಷಸ ಪವೃತ್ತಿಯನ್ನು ದೂರ ಮಾಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಈ ಒಂಬತ್ತು ದಿನಗಳ ಹಬ್ಬ ನಮಗೆಲ್ಲರಿಗೂ ಸಹಕಾರಿಯಾಗಿದೆ ಎಂದು ಹೇಳಿದರು. ಆತಿಥಿಗಳಾಗಿ ದ.ಕ.ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಎಸ್.ಬಿ.ಜಯರಾಮರಾಮ ರೈ ಮಾತಾನಾಡಿ ಪುರಾಣದಲ್ಲಿಯೂ ದಸರಾ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ನಾಡಿನೆಲ್ಲೆಡೆ ಸುಖ ಶಾಂತಿ ನೆಮ್ಮದಿ  ‌ನೆಲೆಗೊಳ್ಳುವಂತಾಗಲಿ, ನಾವು ಮಾಡಿದ ದೇವರ ಸೇವೆಯಲ್ಲಿ ತೃಪ್ತಿ ಸಿಗಲು, ದೇವರ ಅನುಗ್ರಹ ಬೇಕು ಎಂದು ಹೇಳಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರಾದ ವಿಶ್ವನಾಥ ಶೆಟ್ಟಿ ಸಾಗು, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ವಿದ್ಯಾಮತಾ ಅಕಾಡೆಮಿ ಪುತ್ತೂರು ಭಾಗ್ಯೇಶ್ ರೈ ಕೆಯ್ಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನವರಾತ್ರಿ ಉತ್ಸವದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಒಂಬತ್ತು ಭಜನಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನವರಾತ್ರಿ ಉತ್ಸವ ಕಾರ್ಯಕ್ರಮದ ಪ್ರಾಯೋಜಕರಿಗೆ ಮತ್ತು ಸಹಾಕಾರ ನೀಡಿದ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು. ನವರಾತ್ರಿ ಉತ್ಸವಕ್ಕೆ ದೇವಳಕ್ಕೆ ಮತ್ತು ಹರಿಪ್ರಸಾದ್ ರೈ ಹಾಗೂ ಮನೆಯವರು ತಿಂಗಳಾಡಿ ಹೂವಿನ ಅಲಂಕಾರ ಸೇವೆ ಮಾಡಿಸಿದರು. ಅನ್ವಿತಾ ರೈ ಪ್ರಾರ್ಥಿಸಿ,  ಚೇತನ್ ದೇರ್ಲ ಸ್ವಾಗತಿಸಿ,ಜೀವನ್ ವಂದಿಸಿ, ರವಿ ಕುಮಾರ್ ಕೈತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ  ರಂಗ ಪೂಜೆ,ಮತ್ತು ಹರಕೆ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

 ಗೆಜ್ಜೆನಾದ ನೃತ್ಯ ಕಾರ್ಯಕ್ರಮ

ನವರಾತ್ರಿ ಉತ್ಸವದ ಅಂಗವಾಗಿ  ರಾತ್ರಿ ನೃತ್ಯ ಸಂಯೋಜಕಿ ವಿದುಷಿ  ಅನನ್ಯ ತೇಜಸ್ ಕೊಯಂಗಾಜೆ ಸಾರಥ್ಯದಲ್ಲಿ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಪ್ರಾಯೋಜಕತ್ವದಲ್ಲಿ, ಹೊಸಮ್ಮ ಫ್ರೆಂಡ್ಸ್ ಪಲ್ಲತ್ತಡ್ಕ ಸಹಾಕಾರದೊಂದಿಗೆ ಗೆಜ್ಜೆನಾದ ನೃತ್ಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here