ನಾಸಿಕ್‌ಬ್ಯಾಂಡ್, ಚೆಂಡೆಮೇಳ , ಕುಣಿತ ಭಜನೆ ,ಡಿಜೆ ಸೌಂಡ್ಸ್ ವಿಶೇಷ ಆಕರ್ಷಣೆ
ಸವಣೂರು : ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.24 ರಂದು ನಡೆಯಿತು.ಶಾರದೋತ್ಸವದ ವಿಸರ್ಜನಾ ಶೋಭಾಯಾತ್ರೆ ವೈಭವದಿಂದ ನಡೆಯಿತು.ಸಂಜೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು.
ಶ್ರೀ ಶಾರದಾ ಮೂರ್ತಿಯ ವಿಜೃಂಭಣೆಯ ಶೋಭಾಯಾತ್ರೆಯು ಮುಖ್ಯ ರಸ್ತೆಯಲ್ಲಿ ಸಾಗಿತು. ಶೋಭಾಯಾತ್ರೆಯಲ್ಲಿ ಕೇರಳದ ಆಕರ್ಷಕ ಚೆಂಡೆ ಮೇಳ , ಡಿ.ಜೆ. ಸೌಂಡ್ಸ್, ಸವಣೂರು ಯುವಕ ಮಂಡಲದ ನಾಸಿಕ್‌ಬ್ಯಾಂಡ್, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ಕುಣಿತ ಭಜನೆಯೊಂದಿಗೆ ಅಲಂಕೃತ ವಾಹನದಲ್ಲಿ ಶ್ರೀಶಾರದಾ ಮೂರ್ತಿಯ ಶೋಭಾಯಾತ್ರೆ ನಡೆದು ,ಸರ್ವೆ ಗೌರಿ ಹೊಳೆಯಲ್ಲಿ ಶ್ರೀಶಾರದಾ ಮೂರ್ತಿಯ ಜಲಸ್ಥಂಬನ ನಡೆಯಿತು.ಶೋಭಾಯಾತ್ರೆ ಸಾಗಿದ ದಾರಿಯುದ್ದಕ್ಕೂ ಭಕ್ತಾದಿಗಳಿಂದ ಹೂ, ಹಣ್ಣು ಕಾಯಿ ಸಮರ್ಪಣೆ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಸರ್ವೆಯಲ್ಲಿ ಶಾರದಾಮೂರ್ತಿಯ ವಿಸರ್ಜನಾ ಸಮಯದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಆಗಮಿಸಿ ಶ್ರೀಶಾರದೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ , ತಾರಾನಾಥ ಕಾಯರ್ಗ ಶಾಸಕರ ಜತೆಗಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ , ಸ್ಥಾಪಕಾಧ್ಯಕ್ಷ ಮೋಹನ ರೈ ಕೆರೆಕ್ಕೋಡಿ ,ಅಧ್ಯಕ್ಷ ವಸಂತ ರೈ ಸೊರಕೆ ,ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು , ನಿಕಟ ಪೂರ್ವ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ, ಉಪಾಧ್ಯಕ್ಷ ಕುಂಞ ನಲಿಕೆ , ಕೋಶಾಧಿಕಾರಿ ಎಂ.ಟಿ. ಗಿರಿಧರ ಗೌಡ ಮೆದು , ಸಮಿತಿಯ ಗೌರವ ಸಲಹೆಗಾರರು , ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.