ಪುತ್ತೂರು: ಶ್ರೀ ಕ್ಷೇತ್ರ ಕೆಯ್ಯೂರಿನ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸಾಹಿಕಲ ಯಕ್ಷ ಬಳಗ ಬಾಲವನ ಪುತ್ತೂರು ಇವರಿಂದ ಕದಂಬ ಕೌಶಿಕೆ ಯಕ್ಷಗಾನ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ನಿರ್ದೇಶನದಲ್ಲಿ ನಡೆಯಿತು.
ಭಾಗವತರಾಗಿ ಕು.ರಚನಾ ಚಿದ್ಗಲ್ ಮತ್ತು ಸಿಂಚನ ಮೂಡುಕೋಡಿ, ಚೆಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಗುತ್ತಿಗಾರು ಮತ್ತು ರೋಷನ್ ಕಾಟುಕುಕ್ಕೆ ಚಕ್ರತಾಳದಲ್ಲಿ ಗಿರೀಶ್ ಸಹಕರಿಸಿದರು.
ದೇವೇಂದ್ರನಾಗಿ ಜ್ಯೋತಿ ಅಶೋಕ್ ಬಲಗಳಾಗಿ ಕು.ಸಂಜನಾ ಮೂಡುಕೋಡಿ, ಮಲ್ಲಿಕಾ ಪುರಂದರ ಬಲ್ನಾಡು ಶುಂಭನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ನಿಶುಂಭನಾಗಿ ಡಾ. ಅನನ್ಯಲಕ್ಷ್ಮಿ ಸಂದೀಪ್, ಚಂಡಾಸುರನಾಗಿ ಶ್ರುತಿ ವಿಸ್ಮಿತ್ ಗೌಡ ಬಲ್ನಾಡು ಮುಂಡಾಸುರನಾಗಿ ಕು. ರೇಣುಕಾ ಗೌಡ ಕೌಶಿಕೆಯಾಗಿ ಪ್ರೇಮ ಕಿಶೋರ್ ಪುತ್ತೂರು, ಧೂರ್ಮಾಕ್ಷನಾಗಿ ಕು.ಪ್ರಸಕ್ತಾ ರೈ ಸುಗ್ರೀವನಾಗಿ ಸುರೇಖಾ ಅಶೋಕ್ ರೈ ರಕ್ತಬೀಜನಾಗಿ ಶಾಲಿನಿ ಅರುಣ್ ಶೆಟ್ಟಿ ಕೊಲ್ಲಾಡಿ ರಕ್ತೇಶ್ವರಿಯಾಗಿ ರಾಜೀವಿ ನಾಗೇಶ್ ಮತ್ತು ಕಾಳಿಯಾಗಿ ಕು.ವಿಸ್ಮಿತಾ ರೈ ಅಭಿನಯಿಸಿದ್ದರು. ಯಕ್ಷಗಾನ ಕಾರ್ಯಕ್ರಮ ಪುತ್ತೂರು ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಿತ್ತು.