ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಗೋ ರಥಯಾತ್ರೆಗೆ ಸ್ವಾಗತ

0

ಪುತ್ತೂರು: ಶ್ರೀ ರಾಧಾ ಸುರಭಿ ಗೋ‌ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಪುದು ಹಾಗೂ ಗೋ ಸೇವಾ ಗತಿ ವಿಧಿ, ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ರಥಯಾತ್ರೆಯು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿರುವ ಶ್ರೀರಾಮ ಶಾಲೆಗೆ ಆಗಮಿಸಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕ ಸಮಿತಿ ಹಾಗೂ ಆಡಳಿತ ಮಂಡಳಿ ಸದಸ್ಯರು ರಥಯಾತ್ರೆಗೆ ಸ್ವಾಗತ ಕೋರಿದರು. ಗೋಮಾತೆಯ ಪೂಜೆಯ ಬಳಿಕ ಪ್ರಕಾಶ್ ಚಂದ್ರ ಕೈಕಾರ ಗೋವು ಭಾರತೀಯ ಸಂಸ್ಕೃತಿಯ ಉಸಿರು, ಗೋವಿನ ಹಾಲು, ಗೋಮೂತ್ರ ಮತ್ತು ಗೋಮಯಗಳ ಮೂಲಕ ಎಲ್ಲವೂ ಉಪಯೋಗಕಾರಿ ಮಾತ್ರವಲ್ಲದೇ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ತಿಳಿಸಿದ ಅವರು ರಥಯಾತ್ರೆಯ ಉದ್ದೇಶವನ್ನು ತಿಳಿಸಿಕೊಟ್ಟರು.

LEAVE A REPLY

Please enter your comment!
Please enter your name here