ಕ್ರೀಡಾಸ್ಫೂರ್ತಿಯಿಂದ ಆಡಿದಾಗ ಯಶಸ್ಸು ಒಲಿಯುತ್ತದೆ-ವಂ|ಲಾರೆನ್ಸ್ ಮಸ್ಕರೇನ್ಹಸ್
ಪುತ್ತೂರು:ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಪದವಿ ಪೂರ್ವ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನೆಯು ಅ.27 ರಂದು ಫಿಲೋಮಿನಾ ಕಾಲೇಜಿನ ಕ್ರೀಡಾಂಗದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಜನಪ್ರಿಯ ಕ್ರೀಡೆ. ಶಾಲಾ ದಿನಗಳಿಂದಲೇ ಮಕ್ಕಳು ಈ ಕ್ರೀಡೆಯನ್ನು ಆಡುತ್ತಾ ಬಂದಿರುತ್ತಾರೆ. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಆಡಿದಾಗ ಯಶಸ್ಸು ಒಲಿಯುತ್ತದೆ. ನಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚಿದಾಗ ಸಮಾಜವೂ ನಮ್ಮನ್ನು ಗುರುತಿಸುವಂತಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬಳಗ ಪ್ರಾರ್ಥಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಮ ಡಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಭಾಗವಹಿಸುವ ತಂಡಗಳು…
ಬಾಲಕರ ವಿಭಾಗ..
-ಫಿಲೋಮಿನಾ ಪ.ಪೂ ಕಾಲೇಜು
-ವಿವೇಕಾನಂದ ಪ.ಪೂ ಕಾಲೇಜು
-ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜು
-ಕೆಯ್ಯೂರು ಸರಕಾರಿ ಪ.ಪೂ ಕಾಲೇಜು,
-ಬೆಟ್ಟಂಪಾಡಿ ಸರಕಾರಿ ಪ.ಪೂ ಕಾಲೇಜು
-ಬೆಳಿಯೂರುಕಟ್ಟೆ ಸರಕಾರಿ ಪ.ಪೂ ಕಾಲೇಜು
-ನರೇಂದ್ರ ಪ.ಪೂ ಕಾಲೇಜು
-ಅಂಬಿಕಾ ಪ.ಪೂ ಕಾಲೇಜು
-ಜ್ಯೂನಿಯರ್ ಕಾಲೇಜು ಕೊಂಬೆಟ್ಟು
ಬಾಲಕಿಯರ ವಿಭಾಗ…
-ಫಿಲೋಮಿನಾ ಪ.ಪೂ ಕಾಲೇಜು
-ವಿವೇಕಾನಂದ ಪ.ಪೂ ಕಾಲೇಜು
-ಜ್ಯೂನಿಯರ್ ಕಾಲೇಜು ಕೊಂಬೆಟ್ಟು
-ಅಂಬಿಕಾ ಪ.ಪೂ ಕಾಲೇಜು
-ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜು
ಕ್ರೀಡಾಪಟುಗಳಿಗೆ ಹಸ್ತಲಾಘವ..
ಉದ್ಘಾಟನಾ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿನ ಗಣ್ಯರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಬಾಲಕರ ವಿಭಾಗದ ಒಂಭತ್ತು ತಂಡಗಳ ಮತ್ತು ಬಾಲಕಿಯರ ವಿಭಾಗದ ಐದು ತಂಡಗಳ ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.