ಬಂಟ್ವಾಳ : ಕೇಂದ್ರ ಸರ್ಕಾರದ ’ನನ್ನ ನೆಲ ನನ್ನ ದೇಶ ಅಭಿಯಾನದಡಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸುದರ್ಶನ್ ಕೆ.ವಿ,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ದರ್ಶನ್ ಕೆ., ಬಂಟ್ವಾಳ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಜೋಸ್ವಿಟಾ, ಕಡಬ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಸುದೀಪ್ ಸೇರಿದಂತೆ ಜಿಲ್ಲೆಯ 14 ಮಂದಿ ಕಾಲೇಜು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ದೆಹಲಿಗೆ ಪಯಣಿಸುವ ಉದ್ದೇಶದಿಂದ ಅ. 26ರಂದು ರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ.
ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್ , ನಗರಸಭೆ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಮಣ್ಣನ್ನು ಅಮೃತ ಕಲಶದಲ್ಲಿ ದೆಹಲಿಗೆ ತಲುಪಿಸುವ ಜವಬ್ದಾರಿಯನ್ನು ಈ ವಿದ್ಯಾರ್ಥಿಗಳಿಗೆ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ನೀಡಿದ್ದು, ಸರ್ಕಾರದ ಅನುದಾನದಲ್ಲಿ ದೆಹಲಿಗೆ ಪಯಣ ಬೆಳೆಸಲಿದ್ದಾರೆ.
ಕಡಬ ಟೌನ್ ಪಂಚಾಯತ್ ನಿಂದ ಕಡಬ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಸುದೀಪ್, ಪುತ್ತೂರುನಗರ ಸಭೆಯಿಂದ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಸುದರ್ಶನ್ ಕೆ.ವಿ., ವಿಟ್ಲ ಪಟ್ಟಣ ಪಂಚಾಯತ್ ನಿಂದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದರ್ಶನ್ ಕೆ. ದೆಹಲಿ ಪ್ರವಾಸಕ್ಕೆ ಆಯ್ಕೆಯಾಗಿದ್ದು ದೆಹಲಿಯತ್ತ ಪಯಣ ಬೆಳೆಸಿದ್ದಾರೆ.
ಅಮೃತ ಕಲಶ ಯಾತ್ರೆಯು ಅ.27ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗುತ್ತದೆ. ಅಪರಾಹ್ನ 2.೦೦ ಗಂಟೆಗೆ ಸರಿಯಾಗಿ ವಿಶೇಷ ಅಮೃತಕಲಶ ರೈಲು ಬೆಂಗಳೂರಿನಿಂದ ನಿರ್ಗಮಿಸಿ, 29ನೇ ತಾರೀಖು ದೆಹಲಿಗೆ ತಲೂಪಲಿದೆ. ಅ.30 ಮತ್ತು 31ನೇ ತಾರೀಕು ದೆಹಲಿಯಲ್ಲಿ ಕಾರ್ಯಕ್ರಮ ನಡೆದ ಬಳಿಕ ಉರಿಗೆ ಪಯಣಿಸಲು ವ್ಯವಸ್ಥೆ ಮಾಡಲಾಗಿದೆ.
ಬೇಂಗಳೂರು ವರೆಗಿನ ಪ್ರಯಾಣಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಪ್ರಯಾಣ ವೆಚ್ಚ ಮತ್ತು ಊಟದ ವೆಚ್ಚವನ್ನು ಭರಿಸಲಿದ್ದು, ಬೆಂಗಳೂರಿನಿಂದ ದೆಹಲಿಗೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರದಿಂದ ಮಾಡಲಾಗಿರುತ್ತದೆ.