





ಪುತ್ತೂರು: ಸವಣೂರು ಮುಂಡತ್ತಡ್ಕ ಶ್ರೀ ಮಾರಿಯಮ್ಮ ದೇವೀ ಮತ್ತು ಸಪರಿವಾರ ದೈವಗಳ ದೇವಸ್ಥಾನದ ಧರ್ಮದೈವ ಪಂಜುರ್ಲಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆಯ ಅಮಂತ್ರಣ ಪತ್ರ ಬಿಡುಗಡೆಯು ದೇವಸ್ಥಾನದ ವಠಾರದಲ್ಲಿ ಜರಗಿತು. ದೇವಸ್ಥಾನದ ಪ್ರತಿಷ್ಠಾ ಸಮಿತಿಯ ಗೌರವಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಅಧ್ಯಕ್ಷ ದಿನೇಶ್ ಮೆದು, ಕಾರ್ಯದರ್ಶಿ ತಾರಾನಾಥ ಕಾಯರ್ಗ, ಸದಸ್ಯರಾದ ಗಿರಿಶಂಕರ್ ಸುಲಾಯ ದೇವಸ್ಯ, ಮಹೇಶ್ ಕೆ. ಸವಣೂರು, ಶ್ರೀಧರ್ ಇಡ್ಯಾಡಿ, ಗಂಗಾಧರ್ ಪೆರಿಯಡ್ಕ, ಸಂಜೀವ ಪೂಜಾರಿ ಅಗರಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕಿನ್ನಿಗ ಆರ್, ಅಧ್ಯಕ್ಷ ಬಾಬು ದೋಳ್ಪಾಡಿ, ಉಪಾಧ್ಯಕ್ಷ ಬಾಬು ಮುಂಡೋತ್ತಡ್ಕ, ಕಾರ್ಯದರ್ಶಿ ಕಿರಣ್ಕುಮಾರ್ ಜಿ. ಕುಂತೂರು, ಜೊತೆ ಕಾರ್ಯದರ್ಶಿಗಳಾದ ದಯಾನಂದ, ಹರೀಶ್ ಮುಂಡೋತ್ತಡ್ಕ, ಕೋಶಾಧಿಕಾರಿ ಯೋಗೀಶ್ ಮುಂಡೋತ್ತಡ್ಕ, ಹರೀಶ್ ಆರ್ ರಾಮಕುಂಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.









