





ಪುತ್ತೂರು: ಪಂಜಳ ನಿವಾಸಿ ಎಪಿಎಂಸಿ ರಸ್ತೆ ಬಳಿಯ ರೈ ಚಿಕನ್ ಸೆಂಟರ್ನ ಗಂಗಾಧರ್ ನಾೖಕ್ ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯವು ನ.2ರಂದು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ನಡೆಯಿತು.
ಕುಟುಂಬದ ಹಿರಿಯರು ಮತ್ತು ಗುರಿಕ್ಕಾರ್ ಆಗಿರುವ ಅಮೈ ತ್ಯಾಂಪಣ್ಣ ನಾೖಕ್ ನುಡಿನಮನ ಸಲ್ಲಿಸಿದರು. ಗಂಗಾಧರ ನಾೖಕ್ ಅವರ ತಾಯಿ ಗಿರಿಜಾ, ಸಹೋದರ ಮೋಹನ್ ನಾೖಕ್ ಹಾಗೂ ಸಹೋದರಿಯರು ಈ ಸಂದರ್ಭ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಧು ಬಳಗದವರು ಆಗಮಿಸಿ ಗಂಗಾಧರ ನಾೖಕ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು











