





ಪುತ್ತೂರು: ಮದುವೆ ಸಮಾರಂಭ ಮುಗಿಸಿದ್ದ ಮನೆಯಲ್ಲಿ ಉಪಯೋಗಿಸಿದ ಪ್ಲಾಸ್ಟಿಕ್ ಸೇರಿದಂತೆ ಇತರ ಕಸಕಡ್ಡಿಗಳನ್ನು ರಸ್ತೆ ಬದಿಯಲ್ಲಿ ಹಾಕಿ ಬೆಂಕಿ ಕೊಟ್ಟು ಸುಡುತ್ತಿದ್ದವರ ಮೇಲೆ ಕೆಯ್ಯೂರು ಗ್ರಾಪಂ ದಂಡನೆಯ ಕ್ರಮ ಕೈಗೊಂಡಿದೆ. ಕೆಯ್ಯೂರು ಸೊಸೈಟಿಯ ಬಳಿಯ ಮನೆಯೊಂದರಲ್ಲಿ ಇತ್ತೀಚೆಗೆ ಮದುವೆ ಸಮಾರಂಭ ಮುಗಿದಿದ್ದು ಈ ವೇಳೆ ಉಪಯೋಗಿಸಿದ ಪ್ಲಾಸ್ಟಿಕ್ ಸೇರಿದಂತೆ ಇತರ ಕಸಕಡ್ಡಿಗಳನ್ನು ರಸ್ತೆ ಬದಿಯಲ್ಲಿ ಬೆಂಕಿ ಇಟ್ಟು ಸುಡುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು ಸ್ಥಳಕ್ಕೆ ಹೋಗಿ ಎಚ್ಚರಿಕೆ ನೀಡಿದ್ದು ಅಲ್ಲದೆ ಗ್ರಾಪಂ ಕಛೇರಿಗೆ ಬಂದು ದಂಡನೆ ಪಾವತಿಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.










