ಮೀಫ್ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟ

0

ನೋಬೆಲ್ ಸ್ಕೂಲ್ ಕುಂಜತ್ತಬೈಲ್ ವಿನ್ನರ್ಸ್
ಅನ್ಸಾರ್ ಸ್ಕೂಲ್ ಬಜ್ಪೆ ರನ್ನರ್ಸ್

ಪುತ್ತೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಪುತ್ತೂರು ಮೌಂಟನ್ ವ್ಯೂ ಕ್ರೀಡಾಗಣ ದಲ್ಲಿ ಆಯೋಜಿಸಿದ ಅಂತರ್ ಜಿಲ್ಲಾ ಪ್ರೌಢ ಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಸಂಪನ್ನಗೊಂಡಿದೆ.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ವಹಿಸಿದ್ದರು.


ಪಂದ್ಯಾಟದಲ್ಲಿ ಕುಂಜತ್ತೂರ್ ನೋಬಲ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಬಜ್ಪೆ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಪ್ರಶಸ್ತಿ ತನ್ನದಾಗಿಸಿತು.ಸ್ಕೂಲ್ ಬಜ್ಪೆಯ ಮಹಮ್ಮದ್ ಮಾಶಿಕ್ ಉತ್ತಮ ಆಲ್ ರೌಂಡರ್,ಕುಂಜತ್ತಬೈಲ್ ನೋಬಲ್ ಸ್ಕೂಲ್ ನ ಮಹಮ್ಮದ್ ರಬೀಬ್ ಹಫೀಜ್ ಬೆಸ್ಟ್ ಪಾಸರ್ ,ನೋಬಲ್ ಸ್ಕೂಲ್ ಮಹಮ್ಮದ್ ಸಮೀರ್ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.ರಾಜ್ಯ ವಾಲಿಬಾಲ್ ಸಂಸ್ಥೆ ಅಡ್ ಹಾಕ್ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ವಿಜೇತರಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಜ್ ಕಣ್ಣೂರ್, ಪಂದ್ಯಾಟದ ಸಂಯೋಜಕ ಶಾರಿಕ್ ಕುಂಜತ್ತಬೈಲ್, ಮೌಂಟನ್ ವ್ಯೂ ಪ್ರದಾನ ಕಾರ್ಯದರ್ಶಿ ಹಾಜಿ ಯು ಮಹಮ್ಮದ್ ಪಡೀಲ್,, ಸಂಚಾಲಕ ಮಹಮ್ಮದ್ ಸಾಬ್,ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಆಜಾದ್, ಅಡ್ವೋಕೇಟ್ ನೋಟರಿ ನೂರುದ್ದೀನ್ ಸಾಲ್ಮರ, ಬಿ. ಕೆ. ಮಾರ್ಟ್ ಮಾಲಕ ಮುಈನ್, ಅಬ್ಬಾಸ್ ದರ್ಬೆ,ಸಯ್ಯದ್ ಆಫೀ ತಂಞಳ್, ಜುನೈದ್ ಸಾಲ್ಮರ, ನೌಫಲ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ನಿರ್ದೇಶಕ ಅಶ್ರಫ್,ಸಹಾಯಕ ಶಿಕ್ಷಕ ಯೂಸುಫ್, ರವೂಫ್ ತರಬೇತುದಾರರುಗಳಾದ ಇರ್ಷಾದ್, ರಫೀಕ್, ಜಾನ್ಸನ್ ಮೊದಲಾವರು ಸಹಕರಿಸಿದರು.


LEAVE A REPLY

Please enter your comment!
Please enter your name here