ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಹಿನ್ನೆಲೆ ಭಕ್ತಾಧಿಗಳ ಸಭೆ

0

*ನಮ್ಮ ಜವಾಬ್ದಾರಿಯನ್ನು ಕರ್ತವ್ಯವೆಂದು ಮಾಡಿದಾಗ ಯಶಸ್ಸು ಸಾಧ್ಯ: ಸೌಂದರ್ಯ ಮಂಜಪ್ಪ
*ಎಲ್ಲರೂ ಒಂದಾಗಿ ಕೆಲಸ ಮಾಡೋಣ: ಕೆ. ಜನಾರ್ದನ ಎರ್ಕಡಿತ್ತಾಯ
*ಮಾದರಿ ಕ್ಷೇತ್ರವನ್ನಾಗಿ ಮಾಡುವ ಪ್ರಯತ್ನ ಮಾಡೋಣ : ಮನೋಹರ ನಾಯ್ಕ್ ಕೊಳಕ್ಕೆಮಾರ್
*ಎಲ್ಲರಿಗೂ ಗುರುತರವಾದ ಜವಾಬ್ದಾರಿ ಇದೆ: ಕೃಷ್ಣರಾಜ ಎರ್ಕಡಿತ್ತಾಯ
*ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಶ್ರಮಿಸೋಣ: ದೀರಜ್ ಹಿರ್ಕುಡೆಲು

ಪುತ್ತೂರು: ಪರಿವರ್ತನೆ ಜಗದ ನಿಯಮ. ಎಲ್ಲರ ಸಲಹೆ ಸೂಚನೆಯನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಗುವುದು. ದೇವರ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಪುಣ್ಯದ ಸಮಯ ಇದಾಗಿದೆ. ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳುವ ಭಾಗ್ಯ ನಮಗೆ ಒದಗಿ ಬಂದಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಲಿ.ನಮ್ಮ ಜವಾಬ್ದಾರಿಯನ್ನು ಕರ್ತವ್ಯವೆಂದು ಮಾಡಿದಾಗ ಯಶಸ್ಸು ಸಾಧ್ಯ ಎಂದು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ, ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪರವರು ಹೇಳಿದರು.

ಅವರು ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.20ರಿಂದ ನಡೆಯಲಿರುವ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನ.5ರಂದು ಕ್ಷೇತ್ರದಲ್ಲಿ ನಡೆದ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕ್ಷೇತ್ರ ಬೆಳೆದುಬಂದ ಹಾದಿಯನ್ನು ನಾವು ಸಿಂಹಾವಲೋಕನ ಮಾಡುವ ಅಗತ್ಯವಿದೆ. ನಮ್ಮ‌ ಕರಾವಳಿಯಲ್ಲಿರುವ ಗಟ್ಟಿತನ ಮಹಾನಗರದಲ್ಲಿ ಸಿಗಲು ಸಾದ್ಯವಿಲ್ಲ. ದ.ಕ ಜಿಲ್ಲೆಯ ಪುತ್ತೂರಿನವರಲ್ಲಿ ಗತ್ತು ಗಾಂಭೀರ್ಯತೆ ಇದೆ. ನಿಮ್ಮ ಭಾವನೆಗೆ ತಕ್ಕ ಬೆಲೆ ಸಿಗಲಿದೆ. ನಮ್ಮಲ್ಲಿರುವ ಈರ್ಶೆಯನ್ನು ಬಿಟ್ಟು ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿದೆ. ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಮುನ್ನಡೆಯಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಜನತೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ. ಸಕಲ ಚೈತನ್ಯವನ್ನು ಜನಾರ್ದನ ಸ್ವಾಮಿ ನೀಡುತ್ತಾರೆ. ನಮ್ಮ ಜವಾಬ್ದಾರಿಯನ್ನು ಕರ್ತವ್ಯವೆಂದು ಮಾಡಿದಾಗ ಯಶಸ್ಸು ಸಾಧ್ಯ. ಒಗ್ಗಟ್ಟಿನ ಕೆಲಸ ನಮ್ಮೊಳಗೆ ಆಗಬೇಕಿದೆ. ಪುಣ್ಯದ ಕಾರ್ಯವನ್ನು ಎಲ್ಲರು ಜೊತೆಯಾಗಿ ಮಾಡೋಣ ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ. ಜನಾರ್ದನ ಎರ್ಕಡಿತ್ತಾಯರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಬ್ರಹ್ಮಕಲಶೊತ್ಸವ ಯಶಸ್ವಿಯಾಗಿ ನಡೆಯಲು ಜವಾಬ್ದಾರಿಯುತ ಸಮಿತಿ ರಚನೆ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರನ್ನು ಒಟ್ಟು ಸೇರಿಸಲಾಗಿದೆ‌. ಎಲ್ಲರೂ ಒಂದಾಗಿ ಕೆಲಸ ಮಾಡೋಣ. ಇನ್ನುಳಿದಿರುವುದು ಕೆಲವೇ‌ ದಿನಗಳು ಮಾತ್ರ. ಅದರೊಳಗೆ ಆಗತಕ್ಕಂತಹ ಕೆಲಸಗಳನ್ನು ಮಾಡಿ ಮುಗಿಸಬೇಕಿದೆ ಎಂದರು.

ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿಮನೋಹರ ನಾಯ್ಕ್ ಕೊಳಕ್ಕೆಮಾರ್ ರವರು ಮಾತನಾಡಿ ಐದು ವರುಷಗಳ ಹಿಂದೆ ಆರಂಭವಾದ ದ್ವಜಸ್ಥಂಭ, ರಥ‌ಸಮರ್ಪಣೆ ವ್ಯವಸ್ಥೆಯ ಹಿಂದೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನ ಪಡೋಣ.ಮುಳಿ ಹುಲ್ಲಿನ‌ ಮಹಡಿಯಲ್ಲಿದ್ದ ಈ ಕ್ಷೇತ್ರ ಅಭಿವೃದ್ಧಿ ಹೊಂದುತ್ತಾ ಸಾಗಿ ಇದೀಗ ರಥ, ಧ್ವಜಸ್ಥಂಭ ನಿರ್ಮಾಣದ ಕಾರ್ಯಕ್ಕೆ ಮುಂದಾಗಿದ್ದೇವೆ. ಹಲವರ ಸಲಹೆ ಸೂಚನೆ‌ ಮೇರೆಗೆ ಬ್ರಹ್ಮರಥದ ಮುಕ್ಕಾಲು ಭಾಗ ಕೆಲಸವಾಗಿದೆ. ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯವಾಗಿದೆ. ಆದರೂ ಇನ್ನುಳಿದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಎಲ್ಲರ ಸಹಕಾರ ಬೇಕಾಗಿದೆ. ಎಲ್ಲರೂ ಜೊತೆಯಾಗಿ ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಮುನ್ನಡೆಯೋಣ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ ಎರ್ಕಡಿತ್ತಾಯರವರು ಮಾತನಾಡಿ ಇಂದಿನಿಂದಲೇ ನಾವು ಬ್ರಹ್ಮಕಲಶೋತ್ಸವದ ಸಿದ್ದತೆ ನಡೆಸಬೇಕಾಗಿದೆ. ಎಲ್ಲರಿಗೂ ಗುರುತರವಾದ ಜವಾಬ್ದಾರಿ ಇದೆ. ಎಲ್ಲರೂ ಸ್ವಾ ಇಚ್ಚೆಯಿಂದ ಕೆಲಸ ಮಾಡಿದಾಗ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ದೀರಜ್ ಹಿರ್ಕುಡೆಲುರವರು ಮಾತನಾಡಿ ಎಲ್ಲರೂ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಮಾಡಬೇಕಾಗಿದೆ. ಹಿರಿಯರ ಮಾರ್ಗದರ್ಶನದ ಮೂಲಕ ನಾವೆಲ್ಲರೂ ಕೆಲಸ ಮಾಡೋಣ. ಇನ್ನುಳಿದಿರುವ ದಿನಗಳನ್ನು‌ ನಾವು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು. ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಶ್ರಮಿಸೋಣ ಎಂದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ,ವ್ಯವಸ್ಥಾಪನಾ‌ ಸಮಿತಿ ಸದಸ್ಯರಾದ ಸುಬ್ರಾಯ ನಾಯ್ಕ್ ಕೊಳಕ್ಕೆಮಾರ್, ಚಂದ್ರಶೇಖರ ಕುದ್ಮಾನ್, ಲೀಲಾವತಿ‌ ಹಿರ್ಕುಡೆಲು, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ರಾಮ ಜೋಯಿಶರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊಡಿಪಾಡಿ, ಕಬಕ, ಕುಳ ಗ್ರಾಮದ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ತುಶಾರ ನಂದನ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಿರಿಧರ ಗೌಡ ಗೋಮುಖ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ‌ ಸಮಿತಿ ಸದಸ್ಯರಾದ ಸುಧೀರ್ ಪ್ರಸಾದ್ ಆನಾಜೆ ವಂದಿಸಿದರು.

LEAVE A REPLY

Please enter your comment!
Please enter your name here