ಕಾಣಿಯೂರು: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆದರೆ ಅಂತಹ ವ್ಯಕ್ತಿಗಳು ಕೆಟ್ಟ ವ್ಯಸನದಿಂದ ದೂರ ಇರುತ್ತಾರೆ. ಜೊತೆಗೆ ಸಮಾಜದ ಅಸ್ತಿಗಳಾಗಿತ್ತಾರೆ ಎಂದು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಂಕರ್ ಭಟ್ ಹೇಳಿದರು. ಅವರು ಶ್ರೀ ಕ್ಷೇ. ಧ. ಗ್ರಾ.ಯೋಜನೆ ಬಿ. ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಕಡಬ ಇವರ ಸಹಕಾರದೊಂದಿಗೆ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಮಹೇಶ್ ಕೆ ಸವಣೂರು, ಪ್ರತಿಯೊಬ್ಬ ವಿದ್ಯಾರ್ಥಿಗಳು ಮನದಲ್ಲಿ ದುಶ್ಚಟದಿಂದ ದೂರವಿರುವ ಹಾಗೇ ಜಾಗೃತಿ ಬೆಳೆದಾಗ ಮನೆ, ಸಮಾಜ ಬದಲಾಗುತ್ತದೆ. ಆಗ ಸಮಾಜದಲ್ಲಿ ಸ್ವಾಸ್ಥ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಒಬ್ಬನ ವ್ಯಕ್ತಿತ್ವ ಬೆಳೆಯುವುದು ಆತನಲ್ಲಿರುವ ಹಣ, ಶ್ರೀಮಂತಿಕೆಯಿಂದ ಅಲ್ಲ. ಆತನಲ್ಲಿರುವ ಉತ್ತಮ ಗುಣ ನಡತೆಯಿಂದ ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬೆಳೆಯುತ್ತಾನೆ. ಹದಿಹರೆಯದ ಯುವಕ ಯುವತಿಯರು ಕೆಟ್ಟ ಚಟಗಳಿಗೆ ಆಕರ್ಷಣೆಗೆ ಒಳಗಾಗದೆ ಗುರು ಹಿರಿಯರ ಹಿತವಚನವನ್ನು ಅರ್ಥೈಸಬೇಕು. ಈ ನಿಟ್ಟಿನಲ್ಲಿ ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಠಲ ಗೌಡ ಅಗಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸವಣೂರು ವಲಯದ ಅಧ್ಯಕ್ಷ ವೇಣುಗೋಪಾಲ ಕಳುವಾಜೆ, ವಲಯ ಮೇಲ್ವಿಚಾರಕಿ ಹರ್ಷಾಕುಮಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮೇಘನಾ ಸ್ವಾಗತಿಸಿ, ತೇಜಶ್ರೀ ವಂದಿಸಿದರು. ಲಿಖಿತಾ, ಪೃಥ್ವಿ ಪ್ರಾರ್ಥಿಸಿದರು. ಸೇವಾಪ್ರತಿನಿಧಿ ರಿತೇಶ್ ಸಹಕರಿಸಿದರು.