ಬೆಟ್ಟಂಪಾಡಿ ಕಕ್ಕೂರು ಸ ಹಿ ಪ್ರಾ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

0

ಶಿಕ್ಷಣ ಗುಣಮಟ್ಟದಿಂದಿರಬೇಕಾದರೆ ಶಾಲೆಯಲ್ಲಿ ಉತ್ತಮ ವಾತಾವರಣ ಇರಬೇಕು: ಅಶೋಕ್ ರೈ

ನಿಡ್ಪಳ್ಳಿ :ಶಾಲೆಯಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆ ಇರಬೇಕು. ಶಿಕ್ಷಕರೊಳಗೆ ಪರಸ್ಪರ ಹೊಂದಾಣಿಕೆಯ ಕೊರತೆ ಇದ್ದಲ್ಲಿ‌ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಹೊಂದಾಣಿಕೆಯಲ್ಲಿ ನಡೆದುಕೊಳ್ಳದ ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು.ಶಿಕ್ಷಣ ಗುಣ ಮಟ್ಟದಿಂದ ಇರಬೇಕಾದರೆ ಶಾಲೆಯಲ್ಲಿ ಉತ್ತಮ ವಾತಾವರಣ ಇರಬೇಕು.ಉತ್ತಮ ವಾತಾವರಣ ನಿರ್ಮಾಣಕ್ಕೆ ಶಿಕ್ಷಕರು ‌ಮತ್ತು ಪೋಷಕರು ಜೊತೆಯಾಗಿ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

   ಅವರು ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪುತ್ತೂರು. ಕ್ಷೇತ್ರ ಸಂಪನ್ಮೂಲ ಕೇಂದ್ರ, ಕಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಆಶಯದಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಇದ್ದ ಶಿಕ್ಷಕರ ಕೊರತೆಯನ್ನು ಪರಿಹರಿಸಲಾಗಿದೆ. ಮಾತ್ರವಲ್ಲದೆ ಶಾಲೆಗಳಿಗೆ ವಿಷಯವಾರು ಶಿಕ್ಷಕರ ನೇಮಕಾತಿಯೂ ನಡೆದಿದ್ದು ಗುಣಮಟ್ಡದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

 ಬೆಟ್ಟoಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಸುರೇಶ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಪ್ರತಿಭಾ ಕಾರಂಜಿ ಒಳ್ಳೆಯ ವೇದಿಕೆ ಆಗಿದೆ. ಬುದ್ದಿಶಕ್ತಿ, ಮನೋ ದೃಢತೆ  ಹೆಚ್ಚುತ್ತದೆ ಎಂದರು.

ಇಲಾಖೆಯ ಸಮನ್ವಯ ಅಧಿಕಾರಿ ನವೀನ್ ವೇಗಸ್ ಮಾತನಾಡಿ ಕಾರ್ಯಕ್ರಮಗಳು ಚೊಕ್ಕದಾಗಿರಬೇಕು. ಮಕ್ಕಳ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.ತಾಲೂಕು ದೈಹಿಕ  ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ಮಾತನಾಡಿ ರಾಜ್ಯ ಮಟ್ಟದ ಪ್ರಥಮ ಬಾರಿಗೆ ಪುತ್ತೂರು ರಾಮಕೃಷ್ಣ ಶಾಲೆಯಲ್ಲಿ ಕ್ರೀಡಾ ಕೂಟ  ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವಿಸ್ಮರಣೀಯ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಶಾಸಕ ಅಶೋಕ ಕುಮಾರ್ ರೈ ಮತ್ತು ಟ್ರಸ್ಟಿನ ಅಧ್ಯಕ್ಷ ಗಣಪತಿ ಭಟ್ ಕಕ್ಕೂರು ಇವರನ್ನು  ಸನ್ಮಾನಿಸಲಾಯಿತು. ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಅಂದದ ನಲಿಕಲಿ ಕೊಠಡಿಗೆ ಬಾಜನರಾದ  ಸೂರಂಬೈಲು, ಮುಂಡೂರು, ವಡ್ಯ, ಕಕ್ಕೂರು, ನಿಡ್ಪಳ್ಳಿ ಶಾಲೆಗಳಿಗೆ ಶಾಸಕರು ಪ್ರಶಸ್ತಿ ಪತ್ರ ವಿತರಿಸಿದರು. ಸಮೂಹ ಸಂಪನ್ಮೂಲ  ವ್ಯಕ್ತಿ ಪರಮೆಶ್ವರಿ ಪ್ರತಿಭಾ ಕಾರಂಜಿಯ ಕಿರು ಪರಿಚಯ ನೀಡಿದರು.

 ಎಸ್.ಡಿ.ಎಂ.ಸಿ ಅಧ್ಯಕ್ಷೆ ರವಿಕಲಾ.ಎನ್,  ಪಂಚಾಯತ್ ಉಪಾಧ್ಯಕ್ಷ ಮಹೇಶ್.ಕೆ ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಮೊಯಿದ್ ಕುಂಞ,  ಮಹಾಲಿಂಗ ನಾಯ್ಕ, ಲಲಿತಾ ಚಿದಾನಂದ, ಸುಮಲತಾ, ಪಾರ್ವತಿ ಲಿಂಗಪ್ಪ ಗೌಡ , ಸ್ಥಳೀಯರಾದ ನವೀನ್ ಮಣಿಯಾಣಿ ತಲೆಪ್ಪಾಡಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯ ಪ್ರಕಾಶ್, ಸತ್ಯ ನಾರಾಯಣ ಮಣಿಯಾಣಿ, ತಾಲೂಕು ಪ್ರಾಥಮಿಕ ಶಾಲಾ  ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಗ್ರೇಡ್- 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ  ಸುಧಾಕರ ರೈ ಗಿಳಿಯಾಲು, ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ ಮತ್ತಿತರರು  ಉಪಸ್ಥಿತರಿದ್ದರು.

 ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕ ವಿಷ್ಣು ಭಟ್ ವಂದಿಸಿದರು.ಸೂರಂಬೈಲು ಶಾಲಾ ಶಿಕ್ಷಕ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಸಹಕರಿಸಿದರು.

 ಸನ್ಮಾನ; ಶಾಸಕ ಅಶೋಕ ಕುಮಾರ್ ರೈ ಮತ್ತು ಟ್ರಸ್ಟಿನ ಅಧ್ಯಕ್ಷ ಗಣಪತಿ ಭಟ್ ಕಕ್ಕೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದಲ್ಲಿ ಅಂದದ ನಲಿಕಲಿ ಕೊಠಡಿಗೆ  ಬಾಜನರಾದ  ಸೂರಂಬೈಲು, ಮುಂಡೂರು, ವಡ್ಯ, ಕಕ್ಕೂರು, ನಿಡ್ಪಳ್ಳಿ ಶಾಲೆಗಳಿಗೆ ಶಾಸಕರು ಪ್ರಶಸ್ತಿ ಪತ್ರ ವಿತರಿಸಿದರು. 


LEAVE A REPLY

Please enter your comment!
Please enter your name here