





ಪುತ್ತೂರು: ಹಾರಾಡಿ ನಿವಾಸಿ, ಬೀರಮಲೆ ಶ್ರೀವಿಶ್ವಕರ್ಮ ಸಮಾಜ ಸಭಾದ ಮಾಜಿ ಅಧ್ಯಕ್ಷ ಬಿ.ಎಂ.ಗಣೇಶ್ ಆಚಾರ್ಯರ ಪತ್ನಿ ಶಾರದ(65ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ವಿಶ್ವೇಶ್ವರ ಆಚಾರ್ಯ, ಕಿರಣ ಆಚಾರ್ಯ, ಪುತ್ರಿ ಭಾರತಿ, ಅಳಿಯ ನಳನಚಂದ್ರ ಆಚಾರ್ಯ ಕುಬಣೂರು, ಸೊಸೆಯಂದಿರಾದ ವಾಣಿ, ವಿದ್ಯಾ, ಸಹೋದರರಾದ ದೇವದಾಸ್ ಆಚಾರ್ಯ ಬನ್ನೂರು, “ದಿಶಾ” ಇದರ ನಾಮನಿರ್ದೇಶಿತ ಸದಸ್ಯ ರಾಮದಾಸ್ ಆಚಾರ್ಯ ಹಾರಾಡಿರವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ರಾಜೇಶ್ ಬನ್ನೂರು ಸೇರಿದಂತೆ ಹಲವರು ಭೇಟಿ ನೀಡಿದರು.











