ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಧ್ವಜ ದಿನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆಯು ನ.7ರಂದು ಪುತ್ತೂರು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ಆಚರಿಸಲಾಯಿತು.
ಪುತ್ತೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಧ್ವಜದಿನದ ಸ್ಟಿಕ್ಕರ್ ಬಿಡುಗಡೆಗೊಳಿಸಿದರು. ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ ಮಾತನಾಡಿ ಚಳುವಳಿಯನ್ನು ಬಲಪಡಿಸಲು ಪ್ರತಿವರ್ಷ ನ.7ರಂದು ದೇಶಾದ್ಯಂತ ಧ್ವಜ ದಿನವನ್ನು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತಿದ್ದು, ಸ್ವ-ಶಿಸ್ತು, ಸಮಾಜ ಸೇವೆ ಮತ್ತು ದೇಶಭಕ್ತಿಯ ಮೌಲ್ಯವನ್ನು ಬೆಳೆಸುವ ಮೂಲಕ ಯುವ ಜನರ ಚಾರಿತ್ರ್ಯವನ್ನು ನಿರ್ಮಿಸುವ ಉದ್ದೇಶದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಸಮಿತಿಯ ಮೇಬಲ್ ಡಿಸೋಜ, ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್, ಎಡಿಸಿ ಸ್ಕೌಟ್ಸ್ ರಂಜಿತ್ ಮ್ಯಾಥ್ಯೂಸ್, ವೇದಾವತಿ, ಗ್ರೆಟ್ಟಾ ಪಾಯಸ್, ಗೀತಾ ಆಚಾರ್ಯ ಉಪಸ್ಥಿತರಿದ್ದರು. ಗೈಡ್ ವಿದ್ಯಾರ್ಥಿನಿ ಅನಿಕಾ ದಿನದ ಮಹತ್ವವನ್ನು ತಿಳಿಸಿದರು.