ಪುತ್ತೂರು: ನಗರದ ನೆಲ್ಲಿಕಟ್ಟೆಯ ಭೋಜ ನಾಯ್ಕ್ ಅವರ ಪತ್ನಿ ರಾಜೀವಿ ಎಂಬವರು ಅನಾರೋಗ್ಯ ದಿಂದ ನಡೆದಾಡಲು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರಿಗೆ ತುರ್ತಾಗಿ ಒಂದು ವೀಲ್ ಚೇರ್ ಬೇಡಿಕೆ ಇಟ್ಟಿದ್ದರು. ಅವರ ಅಗತ್ಯತೆಯನ್ನು ಮನಗಂಡು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವರ ಆಶ್ರಯದಲ್ಲಿ ನ.6 ರಂದು ರಾಜೀವಿರವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಎನ್. ರವೀಂದ್ರ ಪೈರವರು ಫಲಾನುಭವಿಗೆ ವೀಲ್ ಚೇರ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ, ಲಯನ್ಸ್ ಕೋಶಾಧಿಕಾರಿ ಹನೀಫ್ ಮುಂಡೂರು,ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರ ಕಾವು ಹೇಮನಾಥ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷರ ಲ್ಯಾನ್ಸಿ ಮಸ್ಕರೇನಸ್, ಪ್ರಾಂತೀಯ ಅಂಬಾಸಿಡರ್ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಅನಿತಾ ಹೇಮನಾಥ್ ಶೆಟ್ಟಿ, ವತ್ಸಲಾ ಪದ್ಮನಾಭ ಶೆಟ್ಟಿ, ವೇದಾವತಿ, ರವಿಪ್ರಸಾದ್ ಶೆಟ್ಟಿ, ಅನ್ವರ್ ಖಾಸಿಂ, ಫಾರೂಕ್ ಬಾಯಬೆ, ವಿಲಿಯಂ ಉಪಸ್ಥಿತರಿದ್ದರು.