





ಅಧ್ಯಕ್ಷ ರಕ್ಷಿತ್ ಅಡ್ಯಾಲು, ಕಾರ್ಯದರ್ಶಿ ಯತೀಶ್ ಪದ್ನಡ್ಕ


ಪುತ್ತೂರು:ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ರಕ್ಷಿತ್ ಅಡ್ಯಾಲು ಹಾಗೂ ಕಾರ್ಯದರ್ಶಿಯಾಗಿ ಯತೀಶ್ ಪದ್ನಡ್ಕ ಆಯ್ಕೆಯಾಗಿದ್ದಾರೆ.
ಕಬಕ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹರ್ಷಿತ್ ಕಬಕ, ಜೊತೆ ಕಾರ್ಯದರ್ಶಿಯಾಗಿ ಮಿಥುನ್ ಬಾಕಿಮಾರ್, ಕೋಶಾಧಿಕಾರಿಯಾಗಿ ಸಂಜಯ್ ದೇವಸ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಕೇತನ್ ಕಬಕ, ಪ್ರಕಾಶ್ ದೇವಸ್ಯ, ಕೇಶವ ಕಲ್ಲಂದಡ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮೂವಳ, ನಾಗೇಶ್ ಪದೆಂಜಾರು, ಪವನ್ ಪದೆಂಜಾರುರವರನ್ನು ಆಯ್ಕೆ ಮಾಡಲಾಯಿತು.





ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷ ವಿ. ಚಂದ್ರಶೇಖರ ನಾಯ್ಕ್, ಕೋಶಾಧಿಕಾರಿ ಜತ್ತಪ್ಪ ಗೌಡ ಅಡ್ಯಾಲು, ಶ್ರೀ ಮಹಾದೇವಿ ಉತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಜಯರಾಮ್ ನೆಕ್ಕರೆ, ಉತ್ಸವ ಸಮಿತಿಯ ಅಧ್ಯಕ್ಷರು ಸಂಜಯ ದೇವಸ್ಯ, ಕೇಶವ ಕಲ್ಲಂದಡ್ಕ, ಕಾರ್ಯದರ್ಶಿ ಸ್ನೇಹಿತ್ ಅಡ್ಯಾಲು, ಹರಿಪ್ರಸಾದ್ ವಿದ್ಯಾಪುರ, ಬಾಲಕೃಷ್ಣ ಅನುಗ್ರಹ ಪೋಳ್ಯ, ಆನಂದ ಗೌಡ ನೆಕ್ಕರೆ , ಸತೀಶ್ ಕಬಕ, ರವೀಶ್, ಜಗದೀಶ್ ಬಾಕಿಮಾರ್, ಲೋಕೇಶ್ ಬಾಕಿಮಾರ್, ಪ್ರಕಾಶ್ ದೇವಸ್ಯ, ಮಿಥುನ್ ಬಾಕಿಮಾರ್, ಮಯೂರ್ ಕಬಕ, ಪ್ರಶಾಂತ್ ಕಳಮೆಮಜಲು, ಶೋಭಿತ್ ಕಳಮೆಮಜಲು, ನಾಗೇಶ್ ಪದೆಂಜಾರು, ರಾಜ ವಿದ್ಯಾಪುರ, ಸುಕುಮಾರ್ ಹೊಸಳಿಕೆ, ಸುಚೇತ್ ಅಡ್ಯಾಲು, ಪ್ರಸಾದ್ ಮೂವಳ, ಕೇತನ್, ಪವನ್ ಪದೆಂಜಾರು, ನಿಶಾಂತ್ ಕಬಕ, ಈಶ್ವರ ಪುಳಿತ್ತಡಿ ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.









