ನ.18-19, ಡಿ.2-3 ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ

0

ಪುತ್ತೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನ.18 ಮತ್ತು 19 ಹಾಗೂ ಡಿ.2 ಹಾಗೂ 3ರಂದು ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳುವಂತೆ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿಎಲ್‌ಓ ಮೇಲ್ವಿಚಾರಕರು ನ.18 ಮತ್ತು 19 ಹಾಗೂ ಡಿ.2 ಮತ್ತು 3 ರಂದು ಪೂರ್ವಾಹ್ನ 10.೦೦ ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತಗಟ್ಟೆಯಲ್ಲಿ ಹಾಜರಿರಬೇಕು. ಅಲ್ಲಿಗೆ ಬರುವ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನು ಪರಿಶೀಲಿಸಿ ಅರ್ಹ ಮತದಾರರಿಂದ, ನಮೂನೆ-6 ನ್ನು ಸ್ವೀಕರಿಸುವುದು. ವಲಸೆಹೋದ / ಮೃತಪಟ್ಟ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ನಮೂನೆ 7ನ್ನು ಸ್ವೀಕರಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ನಮೂದುಗಳಲ್ಲಿ ಯಾವುದಾದರು ತಿದ್ದುಪಡಿ ಅವಶ್ಯವಿದ್ದಲ್ಲಿ ನಮೂನೆ 8ನ್ನು ಸ್ವೀಕರಿಸುವುದು.
ಸಾರ್ವಜನಿಕರು/ಮತದಾರರಿಂದ ಸ್ವೀಕರಿಸಲ್ಪಟ್ಟ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅದೇ ದಿನ ಸಾಯಂಕಾಲ ಸಹಾಯಕ ಮತದಾರರ ನೋಂದಣಾಧಿಕಾರಿ ಕಛೇರಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸುವಂತೆ ಸೂಚಿಸುವುದು. ಸೂಚಿಸಿದ 4 ದಿನಗಳಲ್ಲಿ ಮತಗಟ್ಟೆಗಳಲ್ಲಿ ಮತದಾರರ ವಿಶೇಷ ನೋಂದಾಣಿ ಅಂದೋಲನ ನಡೆಯುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಲು, ನಾಡಕಛೇರಿ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತಿತರು ಕಾರ್ಯನಿರ್ವಾಹಕ ಸಿಬ್ಬಂದಿ ಅನಿರೀಕ್ಷಿತ ಭೇಟಿ ನೀಡಿ ದೃಢಪಡಿಸಿಕೊಳ್ಳುವುದು ಹಾಗೂ ಆಯ್ದ ಮತಗಟ್ಟೆಗಳಿಗೆ ಇಆರ್‌ಓ ಮತ್ತು ಎಇಆರ್‌ಒಗಳು ದಿಢೀರ್ ಭೇಟಿ ನೀಡಿ ದೃಢಪಡಿಸಿಕೊಳ್ಳುವುದು. ಮಿಂಚಿನ ನೋಂದಾಣಿ ಅಭಿಯಾನದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವುದು. ವಿಶೇಷ ನೋಂದಾಣಿ ಅಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲಾ ಹಕ್ಕು ಮತ್ತು ಅಕ್ಷೇಪಣೆಗಳ ವಿವರಗಳನ್ನು ಅದೇ ದಿನ ಸಂಜೆ 6 ಗಂಟೆಯೊಳಗೆ ಕಛೇರಿಗೆ ತಪ್ಪದೇ ವರದಿ ಮಾಡುವುದು ಹಾಗೂ ಸದ್ರಿ ಆಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ಬೂತ್‌ಮಟ್ಟದ ಅಧಿಕಾರಿಯವರಿಂದ ಪಡೆದು, ಅದನ್ನು ನಿಯಾಮಾನುಸಾರ ತನಿಖೆ ನಡೆಸಿ, ಸಾಫ್ಟ್ ವೇರ್ ನಲ್ಲಿ ಅಳವಡಿಸಿ ತಪ್ಪದೇ ಇತ್ಯರ್ಥಪಡಿಸಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here