ಪುತ್ತೂರು ನ.17ರಂದು ಸಾರ್ವಜನಿಕ ಸೀರತ್ ಸಮಾವೇಶ

0

ಪುತ್ತೂರು/ಮಂಗಳೂರು: ದ.ಕ ಜಮಾಅತೇ ಇಸ್ಲಾಮೀ ಹಿಂದ್ ಸಂಘಟನೆ ವತಿಯಿಂದ ಸಾರ್ವಜನಿಕ ಸೀರತ್ ಸಮಾವೇಶ ನ.17ರಂದು ಪುತ್ತೂರಿನ ಪುರಭವನದಲ್ಲಿ ಸಂಜೆ 6.30ರಿಂದ ನಡೆಯಲಿದೆ.
ದೇಶದಲ್ಲಿ ಕೆಡುಕುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಧರ್ಮದ್ವೇಷದಿಂದ ಹಿಡಿದು ಮಾದಕ ವ್ಯಸನ, ಹತ್ಯೆ, ಅತ್ಯಾಚಾರ, ದರೋಡೆ, ಸುಲಿಗೆ, ಭ್ರಷ್ಟಾಚಾರದವರೆಗೆ ಎಲ್ಲವೂ ನಿಯಂತ್ರಣ ಸಿಗದೆ ಮುಂದುವರಿದಿದೆ. ದೇಶದ ಅಭಿವೃದ್ಧಿಯಾಗಬೇಕಿದ್ದರೆ ಭ್ರಷ್ಟಾಚಾರ, ಅತ್ಯಾಚಾರ ಅಂತ್ಯವಾಗಬೇಕು. ದರೋಡೆ, ಸುಲಿಗೆ, ಹತ್ಯೆ, ಅನ್ಯಾಯಗಳಿಗೆ ತೆರೆ ಬೀಳಬೇಕು. ಧರ್ಮದ ಹೆಸರಿನಲ್ಲಿ ವಿಭಜನೆ, ದ್ವೇಷದ ಸರಣಿಗೆ ಇತಿಶ್ರೀ ಹಾಡಲು ಮಹಾನುಭಾವರ ಭೋದನೆಗಳನ್ನು ಪಸರಿಸುವ ಮೂಲಕ ಸಮಾಜದ ಅಂತರಾತ್ಮವನ್ನು ತಟ್ಟಲು ಜಮಾಅತೇ ಇಸ್ಲಾಮೀ ಹಿಂದ್ ಮುಂದಾಗಿದೆ. ಒಂದಾಗಿ ಪ್ರಯತ್ನಪಟ್ಟರೆ ಬದಲಾವಣೆ ಅಸಾಧ್ಯವಲ್ಲ ಎನ್ನುವುದನ್ನು ಮನಗಂಡಿರುವ ಜಮಾಅತೇ ಇಸ್ಲಾಂ ಹಿಂದ್ ಈ ಹಿನ್ನೆಲೆಯಲ್ಲಿ ನಡೆಸುವ ಚಿಂತನ ಮಂಥನ ಕಾರ್ಯಕ್ರಮವೇ ಈ ಸೀರತ್ ಸಮಾವೇಶ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಮಾಅತೇ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಅಧ್ಯಕ್ಷ ಸಿ.ಎ ಮಹಮ್ಮದ್ ಇಸ್ಹಾಕ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ ಎಸ್ ದ್ವಾರಕನಾಥ್, ಖ್ಯಾತ ಸಾಹಿತಿ ಮತ್ತು ಚಿಂತಕರೂ ಆಗಿರುವ ಲಕ್ಷ್ಮೀಶ ತೋಳ್ಪಾಡಿ, ಜಮಾಅತೇ ಇಸ್ಲಾಮೀ ಹಿಂದ್‌ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಮಾಜಿ ಶಾಸಕ ಸಂಜೀವ ಮಠಂದೂರು, ಯುವ ವಾಹಿನಿ ಕೇಂದ್ರೀಯ ಸಮಿತಿ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here