ಪುತ್ತೂರು: ರೋಟರಾಕ್ಟ್ ಕೆನರಾ ವಲಯ ಹಾಗೂ ರೋಟರಾಕ್ಟ್ ಕ್ಲಬ್ ತಿಂಗಳಾಡಿ ಇದರ ವತಿಯಿಂದ ಮಕ್ಕಳ ದಿನಾಚರಣೆ, ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಹರ್ಷಿತ್ ರೈ ಕೆ ಮಾತನಾಡಿ ಶುಭಹಾರೈಸಿದರು. ಶಾಲಾ ಶಿಕ್ಷಕಿ ಶ್ರುತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸ್ಪರ್ಧೆಯಲ್ಲಿ ಕೆಲವರು ಸೋತಿರಬಹುದು ಸೋತವರು ಬೇಸರಿಸದೆ ಮುಂದಿನ ಗುರಿಯ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಅತಿಥಿ ಶರತ್ ಕುಮಾರ್ SDMC ಅಧ್ಯಕ್ಷ ಹಮೀದ್ ಟಿ, ನಿಕಟಪೂರ್ವ ಅಧ್ಯಕ್ಷರು ಪ್ರದ್ವಿನ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಶಾಲಾ ವತಿಯಿಂದ ಹಾಗೂ SDMC ವತಿಯಿಂದ ಕ್ಲಬ್ಬಿನ ಅಧ್ಯಕ್ಷರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕ್ಲಬ್ ಕಾರ್ಯದರ್ಶಿ ಹರೀಶ್ ರೈ ಎಂ ವಂದಿಸಿ, ಕ್ಲಬ್ಬಿನ ಕೋಶಧಿಕಾರಿ ಧನುಷ್ ರೈ ಕಾರ್ಯಕ್ರಮದ ನಿರೂಪಿಸಿದರು.ಕ್ಲಬ್ಬಿನ ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ಕೆನರಾ ವಲಯ ಪ್ರತಿನಿಧಿ ನವೀನ್ ಚಂದ್ರ,ಕಾರ್ಯದರ್ಶಿ ಹಿಮಾಮ್ಸ್, ಜಿಲ್ಲಾ ಕಾರ್ಯದರ್ಶಿ ಶ್ರೇಯಸ್, ಕ್ಲಬ್ ಜೊತೆಕಾರ್ಯದರ್ಶಿ ಕಿರಣ್ ರೈ ಶಾಲಾ ಶಿಕ್ಷಕರಾದ ಮಮತ,ವಿಜಯಲಕ್ಷ್ಮಿ,ಮೋಹಿತ, ಪ್ರತೀಕ್ಷಾ ಉಪಸ್ಥಿತರಿದ್ದರು. ಸಿಹಿ ತಿಂಡಿಯನ್ನು ಶರತ್ ಕುಮಾರ್ ಜಿ ಮತ್ತು ಹರ್ಷಿತ್ ರೈ ಕೆ ವಿತರಿಸಿದರು.