ರಾಮಕುಂಜ: ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಎನ್.ಎ. ಅಬೂಬಕ್ಕರ್ ಯಾ ಪುತ್ತುಕುಂಞ(75ವ.)ರವರು ನ.15ರಂದು ನಸುಕಿನಲ್ಲಿ ಹೃದಯಾಘಾತದಿಂದ ತನ್ನ ಮನೆಯಲ್ಲಿ ನಿಧನ ಹೊಂದಿದರು.
ಅಬೂಬಕ್ಕರ್ ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು, ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ನಿಧನ ಹೊಂದಿದ್ದರು. ಮೃತರು ಪತ್ನಿ ಸಫೀಯ, ಪುತ್ರರಾದ ಶರೀಫ್, ಫಾರೂಕ್, ಹಾರಿಸ್, ಪುತ್ರಿಯರಾದ ಜೊಹರಾ, ಆಯಿಷಾ, ತಾಹಿರಾ, ಹಸೀನ, ಮುಹ್ಸೀನ, ತಹ್ಸೀನರನ್ನು ಅಗಲಿದ್ದಾರೆ.