





ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಹೊಸವಕ್ಲು ಮನೆತನದ ಸ್ಪಂದನ ಬಳಗದ ವತಿಯಿಂದ ಬಲಿಯೇಂದ್ರ ಪೂಜೆ ಹಾಗೂ ಕುಟುಂಬ ಮಿಲನ ಸಂಭ್ರಮಾಚರಣೆ ನಡೆಯಿತು.
ಕುಟುಂಬದ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿ ಕೊನೆಯದಾಗಿ ಸುಂದರಿ ಹೊಸವಕ್ಲು ಅವರ ಮನೆಯಲ್ಲಿ ಬಲಿಯೇಂದ್ರ ಪೂಜೆ ನೆರವೇರಿಸಿ ಗುರುಹಿರಿಯರ ಆಶೀರ್ವಾದ ಪಡೆದುಕೊಂಡರು.



ಮುತ್ತಪ್ಪ ಗೌಡ ಹೊಸವಕ್ಲು ಅವರು ಬಲಿಯೇಂದ್ರ ಪೂಜೆಯ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ಶ್ರೀನಿವಾಸ ಗೌಡ ಹೊಸವಕ್ಲು ಬೆಂಗಳೂರು, ಸುಂದರಿ ಹೊಸವಕ್ಲು, ವಾಸುದೇವ ಗೌಡ, ರವಿಚಂದ್ರ ಗೌಡ, ಶ್ರೀಲತಾ ಬೆಂಗಳೂರು, ಕೃತಿಕಾ ಬೆಂಗಳೂರು, ಚಂದ್ರಾವತಿ, ಹರಿಣಾಕ್ಷಿ, ಅನುರಾಧ, ಸುಪ್ರೀತಾ, ಭಾರತಿ, ನಿವೇದಿತಾ, ಮೋಹನ, ಮಲ್ಲಿಕಾ, ಸದಾನಂದ, ಬಾಲಕೃಷ್ಣ, ಪ್ರಸನ್ನ, ಅಪೂರ್ವ, ಪ್ರದೀಪ್, ಅಭಿರಂಜನ್, ಅಭಿರಾಮ್, ಚಿತ್ತರಂಜನ್, ಸಮರ್ಥ, ಸಮೃದ್ಧ, ಸಿದ್ದಾರ್ಥ, ಅನುಜ್, ತನ್ವಿ, ಜಿವಿತ್, ಪಾರ್ಥ, ಮೊನಾಲಿ ಮತ್ತಿತರರು ಉಪಸ್ಥಿತರಿದ್ದರು.















