ನ.19: ಪಂಜದಲ್ಲಿ ತಾಲೂಕು ಹಿರಿಯರ ಕ್ರೀಡಾಕೂಟ

0

ಕಾಣಿಯೂರು: ಸಂಘಟನಾ ಸಮಿತಿ, ಸುಳ್ಯ, ಕಡಬ, ಪುತ್ತೂರು ತಾಲೂಕುಗಳ ಹಿರಿಯರ 10ನೇ ವರ್ಷದ ಕ್ರೀಡಾಕೂಟ, ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ ಇದರ ಆಶ್ರಯದಲ್ಲಿ ತಾಲೂಕು ಹಿರಿಯರ ಕ್ರೀಡಾಕೂಟವು ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ 19ರಂದು ನಡೆಯಲಿದೆ. ಬೆಳಿಗ್ಗೆ ಕ್ರೀಡಾಕೂಟವನ್ನು ಪಂಜ ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕಲ್ಕ ಉದ್ಘಾಟಿಸಲಿದ್ದಾರೆ. ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್ ಸಭಾಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆ ನೆರವೇರಿಸಲಿದ್ದು, ಪಂಜ ನಾಡಕಚೇರಿ ಉಪತಹಶೀಲ್ದಾರ್ ಚಂದ್ರಕಾಂತ ಎಮ್, ಆರ್ ದ್ವಜಾರೋಹಣ ನೆರವೇರಿಸಲಿದ್ದಾರೆ. ಹಿರಿಯರ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷ ರವಿಕುಮಾರ್ ಚಳ್ಳಕೋಡಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here