ಪೆರಾಬೆ: ಆಲಂಕಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಪೆರಾಬೆ: ಆಲಂಕಾರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯು ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಡಬ ವಲಯದ ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಉಪಾಧ್ಯಾಯರವರು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ನಿಂಗರಾಜು ಕೆ.ಪಿ., ತಾಲೂಕು ಕಾರ್ಯದರ್ಶಿ ಬಾಲಕೃಷ್ಣ, ಸಿಆರ್‌ಪಿ ಪ್ರಕಾಶ್ ಬಾಕಿಲ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನದಾಸ್ ರೈ ಪರಾರಿ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ, ಉಪಾಧ್ಯಕ್ಷೆ ವೇದಾವತಿ, ಸದಸ್ಯೆ ಸುಶೀಲಾರವರು ಶುಭಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ನೇಮಿರಾಜ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಸುಚೇತಾ ಕುಮಾರಿ ಬಿ.ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಪ್ರಸಾದ್ ವಂದಿಸಿದರು. ಶಿಕ್ಷಕಿ ಹೇಮಲತಾಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.


ಸಮಗ್ರ ಪ್ರಶಸ್ತಿ:
ಪ್ರತಿಭಾ ಕಾರಂಜಿಯ ಹಿರಿಯ ವಿಭಾಗದಲ್ಲಿ ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಿರಿಯ ವಿಭಾಗದಲ್ಲಿ ಆಲಂಕಾರು ಶ್ರೀ ಭಾರತೀ ಹಿ.ಪ್ರಾ ಶಾಲೆ ಪ್ರಥಮ ಸಮಗ್ರ ಹಾಗೂ ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here