ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜಿನ ಎನ್.ಸಿ.ಸಿ ಘಟಕದ ಸಿಎಸ್ಎಂ ಶಮಂತ್ .ಕೆ ಅವರು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನೀಪಥ್ ಯೋಜನೆಯಲ್ಲಿ, ಅಗ್ನಿವೀರನಾಗಿ ಇಂಡಿಯನ್ ನೇವಿಗೆ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ, ಕಾಡುಸೊರಂಜ ನಿವಾಸಿಯಾದ ಕರುಣಾಕರ ಗೌಡ .ಕೆ ಮತ್ತು ಸುಶೀಲ ದಂಪತಿಯ ಪ್ರಥಮ ಪುತ್ರ.
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ದ್ವಿತೀಯ ಗಣಕ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಎನ್ಸಿಸಿ ಘಟಕದ ಮುಖ್ಯಸ್ಥ ಲೆ . ಭಾಮಿ ಅತುಲ್ ಶೆಣೈ ಅವರು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನೀಪಥ್ ಗೆ ಆಯ್ಕೆಯಾಗಲು ಪ್ರೋತ್ಸಾಹ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮತ್ತು ಎನ್ಸಿಸಿ ಘಟಕ, ಆಡಳಿತ ಮಂಡಳಿ, ಐ ಕ್ಯೂ ಎ ಸಿ ಘಟಕ, ಉಪನ್ಯಾಸಕ ವೃಂದ ಸಿ, ಎಸ್, ಎಂ ಶಮಂತ್ .ಕೆ ಯವರಿಗೆ ಶುಭಹಾರೈಸಿದರು.