ಕೆಯ್ಯೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು,ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ `ಕಲಾ ಸಂಗಮ2023–24 ನ.20ರಂದು ಕೆಪಿಎಸ್ ಕೆಯ್ಯೂರಿನಲ್ಲಿ ನಡೆಯಿತು. ನಾಲ್ಕು ವಲಯಗಳಿಂದ ಆಯ್ಕೆಯಾದ ಪ್ರೌಡಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ಸ್ವರ್ಧೆಗಳಲ್ಲಿ ಪ್ರಥಮ ಸ್ಥಾನ ಸಮಗ್ರ ಪ್ರಶಸ್ತಿಯನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಪಡೆದುಕೊಂಡರು.ದ್ವೀತಿಯ ಸ್ಥಾನ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾದ್ಯಮ ವಿದ್ಯಾಸಂಸ್ಥೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ ಜಯರಾಮ ರೈ,ಕೆಪಿಎಸ್ ಕೆಯ್ಯೂರು ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕೆ.ಪಿ.ಎಸ್ ಕೆಯ್ಯೂರು ಎಸ್ ಡಿ.ಎಂ.ಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳ,ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ಪದವೀಧರೇತರ ಮುಖ್ಯ ಗುರು ಬಾಬು.ಎಂ, ಕೆಪಿಎಸ್ ಕೆಯ್ಯೂರು ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ, ಬಿ.ಆರ್.ಪಿ ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್, ಡಾ.ಹರ್ಷಕುಮಾರ್ ರೈ ಮಾಡಾವು ಆಡಳಿತ ನಿರ್ದೇಶಕ ಬ್ರೈಟ್ ವೇ ಇಂಡಿಯಾ ಮಂಗಳೂರು, ವಿಜಯ ಕುಮಾರ್ ನಾಯ್ಕ ಪು.ತಾ.ಪ್ರೌಡಶಾಲಾ ಸಹ ಶಿಕ್ಷಕ ಸಂಘ ಕಾರ್ಯದರ್ಶಿ, ಸಿ.ಆರ್.ಪಿ.ಪುತ್ತೂರು ಆಶ್ರಪ್, ಬಿ.ಐ.ಇ.ಆರ್.ಟಿ ತನುಜಾ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಉಪಸ್ಥಿತರಿದ್ದರು.