ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 22 ಮತ್ತು 23 ರಂದು ಕಾಲೇಜು ವಾರ್ಷಿಕೋತ್ಸವವು ಜರುಗಲಿದೆ.
ನವೆಂಬರ್ 22 ರಂದು ಅಪರಾಹ್ನ 1.30 ಕ್ಕೆ ನಡೆಯಲಿರುವ ಪ್ರತಿಭಾ ಶೋಭನಮ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣ ಕುಮಾರ್ ಶೆಟ್ಟಿ ವಹಿಸಲಿದ್ದು, ಅತಿಥಿಗಳಾಗಿ ಪುತ್ತೂರು ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ ಎಸ್ ಚಂದ್ರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್, ಸದಸ್ಯೆ ವತ್ಸಲಾ ರಾಜ್ಞಿ ಎಂ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಸಿ ಎಚ್ ಭಾಗವಹಿಸಲಿದ್ದಾರೆ.
ನವೆಂಬರ್ 23 ರಂದು ಪೂರ್ವಾಹ್ನ 9.30 ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ವಹಿಸಲಿದ್ದು, ಅತಿಥಿಗಳಾಗಿ ಅಂತರಾಷ್ಟ್ರೀಯ ಕ್ರೀಡಾಪಟು ವಿಶ್ವಾಸ್ ಕೆ. ಎಸ್, ಹಿರಿಯ ವಿದ್ಯಾರ್ಥಿ ಶಶಾಂಕ್ ನೆಲ್ಲಿತ್ತಾಯ, ಮತ್ತು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಕಾಶ ಬಳ್ಳಂಬೆಟ್ಟು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ವಿಶೇಷಚೇತನ ಈಜುಪಟು ವಿಶ್ವಾಸ್ ಕೆ. ಎಸ್. ನವೆಂಬರ್ 23 ರಂದು ವಿವೇಕಾನಂದಕ್ಕೆ:
ಅಂತಾರಾಷ್ಟ್ರೀಯ ಈಜುಗಾರ, ಉತ್ತಮ ಡಾನ್ಸರ್, ಉತ್ತಮ ಜಿಮ್ನಾಸ್ಟ್, ಕಾಲಲ್ಲೇ ಅಡುಗೆ ಮಾಡಬಲ್ಲ ವಿಶ್ವಾಸ್ ಕೆ. ಎಸ್ ಕೋಲಾರದ ಸತ್ಯನಾರಾಯಣ ಕೆ.ವಿ. ಹಾಗೂ ಉಷಾ ರವರ ಪುತ್ರ. ಎಲ್ಲ ಕೆಲಸಗಳಿಗೂ ಕಾಲೇ ಗತಿ. ಏಕೆಂದರೆ ಎರಡೂ ಕೈಗಳಿಲ್ಲ. ಕೆನಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದ ಬೆಂಗಳೂರಿನ ಈಜುಗಾರ ವಿಶ್ವಾಸ್ ಕೆ.ಎಸ್ ರವರು ನವೆಂಬರ್ 23 ರಂದು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.