ಗಂಡಿಬಾಗಿಲು ಶಾಲೆಯಲ್ಲಿ ಮುಖ್ಯ ಶಿಕ್ಷಕ ಜನಾರ್ದನ ಗೌಡರ ಶ್ರದ್ಧಾಂಜಲಿ ಸಭೆ

0

ರಾಮಕುಂಜ: ಗಂಡಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದು, ಕೆಲ ದಿನಗಳ ಹಿಂದೆ ಅಕಾಲಿಕವಾಗಿ ನಿಧನ ಹೊಂದಿದ ಆಲಂಕಾರು ನಿವಾಸಿ ಜನಾರ್ದನ ಗೌಡರಿಗೆ ಶ್ರದ್ಧಾಂಜಲಿ ಸಭೆ ನ.25ರಂದು ಗಂಡಿಬಾಗಿಲು ಶಾಲೆಯಲ್ಲಿ ನಡೆಯಿತು.

ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕ ಗುಡ್ಡಪ್ಪ ಬಲ್ಯ ನುಡಿನಮನ ಸಲ್ಲಿಸಿ, ಜನಾರ್ದನ ಗೌಡ ಅವರು ವೃತ್ತಿ ಧರ್ಮ ಇದ್ದ ಸ್ನೇಹ ಜೀವಿಯಾಗಿ, ಸಮಾಜದೊಂದಿಗೆ ಇದ್ದ ಶಿಕ್ಷಕರಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ನಮಗೆಲ್ಲರಿಗೂ ನೋವು ಉಂಟು ಮಾಡಿದೆ, ಅವರ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಅಗರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಹೇಶ್, ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸಿದ್ದಿಕ್ ನೀರಾಜೆ, ಮೃತರ ಪುತ್ರಿ ಹರ್ಷಿತಾ ಮಾತನಾಡಿ ಮೃತರ ಗುಣಗಾನ ಮಾಡಿದರು.

ಹಳೆನೇರೆಂಕಿ ಶಾಲಾ ಮುಖ್ಯಶಿಕ್ಷಕ ಶಾಂತಪ್ಪ ಗೌಡ, ವಳಕಡಮ ಶಾಲೆಯ ನಾರಾಯಣ ಭಟ್, ಸಬಳೂರು ಶಾಲೆಯ ಶೇಖರ್, ಕುಂಡಾಜೆ ಶಾಲೆಯ ಪುಷ್ಪಾವತಿ, ಪ್ರೇಮಾ, ಮೃತ ಜನಾರ್ದನ ಗೌಡ ಅವರ ಪತ್ನಿ ಜಯಮಣಿ, ಪುತ್ರ ಚರಣ್, ಅಳಿಯ ಭರತ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಲತೀಫ್, ಸುದರ್ಶನ್, ಗಣೇಶ್, ಶಾಕಿರ್, ನಿಝಾರ್, ಮಸೀದಿ ಕಾರ್‍ಯದರ್ಶಿ ಅಬ್ದುಲ್ ರಜಾಕ್ ಮರ್‍ವೇಲ್, ಜಿ.ಎಂ. ರಜಾಕ್, ಇಸಾಕ್ ಬೊಲುಂಬುಡ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ಅಬ್ದುಲ್ ಹಮೀದ್, ಮಹಮ್ಮದ್, ಹನೀಫ್, ನಸೀಮಾ, ಹಬೀಬ, ಆಶಾ ಕಾರ್‍ಯಕರ್ತೆ ದಿವ್ಯಾ ರವಿ, ಅಂಗನವಾಡಿ ಕಾರ್‍ಯಕರ್ತರಾದ ಮೋಹಿನಿ, ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಪೂರ್ಣಿಮ ಸ್ವಾಗತಿಸಿ, ಶಿಕ್ಷಕಿ ಶಿಲ್ಪ ವಂದಿಸಿದರು. ರೇಖಾ, ಸುಮಿತ್ರಾ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಚಿತ್ರಾವತಿ ಕಾರ್‍ಯಕ್ರಮ ನಿರೂಪಿಸಿದರು. ಕಾರ್‍ಯಕ್ರಮದಲ್ಲಿ ಪೋಷಕರು, ಊರ ಮಹನೀಯರು ಸೇರಿದರಂತೆ ಸುಮಾರು 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here