ಪುತ್ತೂರು: ಉಡುಪಿಯಲ್ಲಿ ಜರುಗಿದ ವಿಶ್ವ ಬಂಟರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಸ್ಪರ್ಧಿಸಿ ಮಹಿಳೆಯರ ವಿಭಾಗದ ತ್ರೋಬಾಲ್ ಸ್ಪರ್ಧೆಯಲ್ಲಿ ಸಬಿತಾ ಭಂಡಾರಿಯವರ ನೇತೃತ್ವದ ಪುತ್ತೂರು ಬಂಟರ ಸಂಘದ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪದಾಧಿಕಾರಿಗಳು ಹಾಗೂ ಸಂಯೋಜಕರು ಮತ್ತು ತರಬೇತುದಾರರಾದ ರಾಷ್ಟ್ರೀಯ ಕ್ರೀಡಾಪಟು, ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ಶೆಟ್ಟಿ ಕಾವು ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ರವರುಗಳು ಸಹಕರಿಸಿದರು.
ವಿಜೇತ ತಂಡದಲ್ಲಿ ದೀಕ್ಷಾ ರೈ ಪಟ್ಟೆ ನಾಯಕಿಯಾಗಿದ್ದು, ಅವನಿ ರೈ, ಕುಶಿ ರೈ, ವೈಷ್ಣವಿ ರೈ, ಸಾಕ್ಷಿ ರೈ, ನಳಿನಿ ಶೆಟ್ಟಿ, ರಮಾಕಾಂತಿ ರೈ, ಶಾಂಭವಿ ಶೆಟ್ಟಿ, ಮೋಹಿನಿ ರೈ, ಯಶ್ವಿ ರೈ, ವತ್ಸಲಾ ಶೆಟ್ಟಿ, ಧನ್ವಿ ರೈ ಹಾಗೂ ನಿಧೀಶಾ ರೈಯವರು ಪಾಲ್ಲೊಂಡರು