ಪುಣ್ಚಪ್ಪಾಡಿ : ಬಿಜೆಪಿ ಕಾರ್ಯಕರ್ತರ ಸಭೆ

0

ಹಿರಿಯರ ತ್ಯಾಗದ ಫಲದಿಂದ ಬಿಜೆಪಿ ಪಕ್ಷ ಹೆಮ್ಮರವಾಗಿದೆ- ಭಾಗೀರಥಿ ಮುರುಳ್ಯ

ಸವಣೂರು : ಹಿರಿಯರ ತ್ಯಾಗದ ಫಲವಾಗಿ ಬಿಜೆಪಿ ಪಕ್ಷ ಈಗ ಹೆಮ್ಮರವಾಗಿದೆ.ಪಕ್ಷದ ಬಲವರ್ಧನೆಗಾಗಿ ಹಲವು ಮಂದಿ ತಮ್ಮ ಜೀವನವನ್ನು ಧಾರೆಯೆರೆದಿದ್ದಾರೆ.ಅಂತಹ ಹಿರಿಯರ ತ್ಯಾಗ,ಪರಿಶ್ರಮದಿಂದ ಈಗ ನಾವೆಲ್ಲ ಪಕ್ಷವನ್ನು ಅಧಿಕಾರದಲ್ಲಿ ಕಾಣುವಂತಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ನ.29ರಂದು ಪುಣ್ಚಪ್ಪಾಡಿ ಗ್ರಾಮದ ಸಾರಕರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲವು ವರ್ಷಗಳ ಹಿಂದೆ ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಣತೊಟ್ಟು ಲಕ್ಷಾಂತರ ಕಾರ್ಯಕರ್ತರು ಮನೆಮನೆಯಿಂದ ಇಟ್ಟಿಗೆ ಸಂಗ್ರಹಮಾಡುವ ಮೂಲಕ ದೊಡ್ಡ ಅಭಿಯಾನವನ್ನೇ ನಡೆಸಿದರು,ಅದರ ಫಲವಾಗಿ ಈಗ ರಾಮಂದಿರ ನಿರ್ಮಾಣವನ್ನು ನಾವೆಲ್ಲ ಕಾಣುತ್ತಿದ್ದೇವೆ.ರಾಮಮಂದಿರ ನಿರ್ಮಾಣ ಹಾಗೂ ಪಕ್ಷದ ಬಲವರ್ಧನೆಗೆ ಪಣತೊಟ್ಟ ಹಿರಿಯರ ತ್ಯಾಗವನ್ನು ನಾವು ನೆನಪಿಸಿಕೊಳ್ಳವೇಕು ಎಂದರು.

ರಸ್ತೆ ಅಭಿವೃದ್ದಿಯ ಬೇಡಿಕೆ
ನೇರೋಳ್ತಡ್ಕ-ಸಾರಕರೆ ರಸ್ತೆಯಲ್ಲಿ 550 ಮೀಟರ್ ರಸ್ತೆ ಅಭಿವೃದ್ದಿಯಾಗಿದೆ.2025ರಲ್ಲಿ ಸಾರಕರೆ ಬೀಡಿನಲ್ಲಿ ದೈವಗಳ ನಡಾವಳಿ ನಡೆಯಲಿದ್ದು, ಈ ಸಂದರ್ಭದಲ್ಲಿ
ಇನ್ನುಳಿದ 500 ಮೀಟರ್ ರಸ್ತೆಯ ಅಭಿವೃದ್ದಿಗೆ ಅನುದಾನ ನೀಡಬೇಕು ಎಂದು ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ,ಸಾರಕರೆಬೀಡು ಶ್ರೀಧರ್ಮರಸು ಉಳ್ಳಾಕುಲು ದೈವಸ್ಥಾನದ ಆಡಳಿತೆದಾರ ಮಹಾಬಲ ಶೆಟ್ಟಿ ಕೊಮ್ಮಂಡ ಅವರು ಶಾಸಕರಲ್ಲಿ ಮನವಿ ಮಾಡಿದರು.ವೇದಿಕೆಯಲ್ಲಿ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ ,ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ ಉಪಸ್ಥಿತರಿದ್ದರು.

ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ನೇರೋಳ್ತಡ್ಕ -ಸಾರಕರೆ ರಸ್ತೆಯ ಅಭಿವೃದ್ದಿ ಕಾಮಗಾರಿ ಮಾಡಿದ ಗುತ್ತಿಗೆದಾರ ಯೋಗೀಶ್ ಪೂಜಾರಿ ಶಾಂತಿಗೋಡು ,ಶಾಸಕಿ ಭಾಗೀರಥಿ ಮುರುಳ್ಯ ,ಸಹಕರಿಸಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ಸವಣೂರು ಶಕ್ತಿ ಕೇಂದ್ರದ ಪ್ರಮುಖ್ ತಾರನಾಥ ಕಾಯರ್ಗ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ನಿರ್ದೇಶಕ ಸಚಿನ್ ಕುಮಾರ್ ಜೈನ್,ಸವಣೂರು ಗ್ರಾ.ಪಂ.ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ,ಯಶೋಧಾ,ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಪ್ರಕಾಶ್ ರೈ ಸಾರಕರೆ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ಆಶಾ ರೈ ಕಲಾಯಿ,ಪ್ರಮುಖರಾದ ಸುರೇಶ್ ರೈ ಸೂಡಿಮುಳ್ಳು ,ಸತೀಶ್ ಬಲ್ಯಾಯ,ಕರುಣಾಕರ ಸಾರಕರೆ, ದಿವಾಕರ ಗುಂಡ್ಯಡ್ಕ,ಪ್ರೀತಿ ಎಂ.ಶೆಟ್ಟಿ ,ರಾಜ್ ದೀಪಕ್ ಶೆಟ್ಟಿ ಮಠ ಮೊದಲಾದವರಿದ್ದರು.
ಬಿಜೆಪಿ ಪುಣ್ಚಪ್ಪಾಡಿ-ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ಕೆ.ಸವಣೂರು ಸ್ವಾಗತಿಸಿದರು.ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here