ದ.2-3: ಕುಂಬ್ರದಲ್ಲಿ ಯುಕೆ ಟ್ರೋಫಿ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ಯು.ಕೆ ಗೈಸ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಯು.ಕೆ ಟ್ರೋಫಿ 2023 ಸೀಸನ್ 4, ಓಪನ್ ಹಾಗೂ ಗ್ರಾಮ ಗ್ರಾಮಗಳ ಕ್ರಿಕೆಟ್ ಪಂದ್ಯಾಕೂಟ ದ.2 ಮತ್ತು 3 ರಂದು ಕುಂಬ್ರ ಕೆಪಿಎಸ್ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ದ.2 ರಂದು ಮಧ್ಯಾಹ್ನದಿಂದ ಮಧ್ಯರಾತ್ರಿ ತನಕ ಓಪನ್ ಮಾದರಿಯ ಪಂದ್ಯಾಕೂಟ ಹಾಗೂ ದ.3 ರಂದು ಬೆಳಿಗ್ಗೆಯಿಂದ ರಾತ್ರಿ ತನಕ ಗ್ರಾಮ ಗ್ರಾಮಗಳ ನಡುವೆಯ ಪಂದ್ಯಾಕೂಟ ನಡೆಯಲಿದೆ.

ಸಭಾ ಕಾರ್ಯಕ್ರಮ ದ.3 ರಂದು ಸಂಜೆ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ರೂ.50 ಸಾವಿರ, ದ್ವಿತೀಯ ರೂ.25 ಸಾವಿರ ನಗದು ಹಾಗೂ ಯುಕೆ ಟ್ರೋಫಿ ಅಲ್ಲದೆ ತೃತೀಯ ಮತ್ತು ಚತುರ್ಥ ಯುಕೆ ಟ್ರೋಫಿ ಹಾಗೂ ಇನ್ನಿತರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.7259284807 ಅಥವಾ 9901943177 ಗೆ ಕರೆ ಮಾಡಬಹುದಾಗಿದೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here