ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕದಾಸ ಜಯಂತಿ

0

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ದಾರ್ಶನಿಕ ಕವಿ ಸಂತ ಶ್ರೇಷ್ಠ ಕನಕದಾಸ ಜಯಂತಿಯು ನ.30 ತಾಲೂಕು ಆಡಳಿತ ಸೌಧದಲ್ಲಿರುವ ತಹಶಿಲ್ದಾರ್ ಸಭಾಂಗಣದಲ್ಲಿ ನಡೆಯಿತು.

ದೀಪ ಪ್ರಜ್ವಲನೆ ಮಾಡಿದ ತಹಶೀಲ್ದಾರ್ ಜೆ. ಶಿವಶಂಕರ ಮಾತನಾಡಿ, ಕನಕದಾಸರ ಜೀವನದ ಸಾಧನೆ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮುನ್ನಡೆಯುವಂತೆ ತಿಳಿಸಿದರು‌.
ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ.ಮಾತನಾಡಿ, ಕನಕದಾಸರು ರಚಿಸಿರುವ ಕೃತಿಗಳು ಬಾಮಿನಿ ಷಟ್ಪದಿಯಲ್ಲಿ ರಚಿತಗೊಂಡಿದೆ. ಐದು ಕೃತಿಗಳಲ್ಲಿ ನಾಲ್ಕು ಕೃತಿಗಳು ಮಾತ್ರ ಲಭ್ಯವಿದೆ. ಅವರ ಸಮಾಧಿಗೆ ವರ್ಷದ 365 ದಿನವೂ ಸಮಾದಿಗೆ ಹೂ ಬೀಳುತ್ತಿರುವುದು ವಿಶೇಷತೆಯಾಗಿದೆ.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here