ಅಪ್ರಾಪ್ತ ಬಾಲಕಿಗೆ ಅಶ್ಲೀಲ ವೀಡಿಯೋ, ಚಿತ್ರಗಳ ಮೆಮೋರಿ ಕಾರ್ಡ್:ಪೊಕ್ಸೋ ಆರೋಪಿ ಖುಲಾಸೆ

0

ಪುತ್ತೂರು:ಅಪ್ರಾಪ್ತ ಬಾಲಕಿಗೆ ಅಶ್ಲೀಲ ವೀಡಿಯೋ, ಚಿತ್ರಗಳಿರುವ ಮೆಮೊರಿ ಕಾರ್ಡ್ ನೀಡಿ ಪೊಕ್ಸೋ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

2022ರ ಅ.15ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಎಂಬಲ್ಲಿ ಅಪ್ರಾಪ್ತ ಬಾಲಕಿಯು ಸಾರ್ವಜನಿಕ ರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಶಮೀರ್ ಎಂಬಾತ ಲೈಂಗಿಕ ಉದ್ದೇಶದಿಂದ ಆಕೆಯನ್ನು ಹಿಂಬಾಲಿಸಿಕೊAಡು ಹೋಗಿ ಅಶ್ಲೀಲವಾದ ವೀಡಿಯೋ ಮತ್ತು ಚಿತ್ರಗಳಿರುವ ಮೆಮೊರಿ ಕಾರ್ಡ್ ನೀಡಿರುವುದಾಗಿ ಆರೋಪಿಸಲಾಗಿತ್ತು.

ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಪೊಕ್ಸೋ ವಿಶೇಷ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ಬಿಡುಗಡೆ ಮಾಡಿದೆ.ಆರೋಪಿ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.

LEAVE A REPLY

Please enter your comment!
Please enter your name here