ಪುತ್ತೂರು : ಪಿ. ಎಂ. ವಿಶ್ವಕರ್ಮ ಯೋಜನೆಯ ನೋಂದಾವಣೆ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ವಿಶ್ವಕರ್ಮ ಯುವ ಮಿಲನ , ದ .ಕ ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ನಗರ ಸಭೆ ಪುತ್ತೂರು ಹಾಗೂ ಪುತ್ತೂರು ತಾಲೂಕು ಟೈಲರ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಪುತ್ತೂರು ನಗರಸಭಾ ಸಭಾಂಗಣದಲ್ಲಿ ಪಿ. ಎಂ. ವಿಶ್ವಕರ್ಮ ಯೋಜನೆ ನೋಂದಾವಣೆ ಕಾರ್ಯಕ್ರಮ ಜರಗಿತು.

ಸಬಾ ಕಾರ್ಯಕ್ರಮದಲ್ಲಿ ನಗರಸಭಾ ಕಾರ್ಯಪಾಲ ಅಭಿಯಂತರ ಶಬರಿನಾಥ ರೈ ನಗರ ಸಭೆಯ ಹಿರಿಯ ನಿರೀಕ್ಷಕ ರಾಮಚಂದ್ರ, ಕೇಂದ್ರ ಸರಕಾರದ ನಾಮ ನಿರ್ದೇಶಕ ರಾಮದಾಸ್ ಹಾರಾಡಿ ,ಪುತ್ತೂರು ವಿಶ್ವಕರ್ಮ ಯುವ ಮಿಲನದ ಅಧ್ಯಕ್ಷ ಹರೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ್ ಆಚಾರ್ಯ, ಟೈಲರ್ ಅಸೋಸಿಯೇಷನ್ ಪುತ್ತೂರು ಕ್ಷೇತ್ರದ ಅಧ್ಯಕ್ಷ ಉಮಾ ಯು ನಾಯಕ್ ಉಪಸ್ಥಿತರಿದ್ದರು. ಟೈಲರ್ ಅಸೋಸಿಯೇಷನ್ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಜಯಂತ ಉರ್ಲಾಂಡಿ ಸ್ವಾಗತಿಸಿ, ವಿಶ್ವಕರ್ಮ ಯುವ ಮಿಲನ್ ನ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ವoದಿಸಿದರು.

LEAVE A REPLY

Please enter your comment!
Please enter your name here