ಪುತ್ತೂರು : ಆಯುರ್ವೇದ ವೈದ್ಯರಾದ ಡಾ. ಶೈಲೇಶ್ ಹಾಗೂ ಹಿಜಾಮಾ ಕಪ್ಪಿಂಗ್ ಥೆರಪಿಯ ವೈದ್ಯರುಗಳಾದ ಡಾ.ಪ್ರಕಾಶ್ , ಡಾ.ಮುಬಿತಾ ಮತ್ತು ಡಾ.ಆಶೀಕ್ ಇವರುಗಳ ತಂಡದಿಂದ ಡಿ. 3 ರಂದು ಬೆಳಗ್ಗೆ 9 ರಿಂದ ಸಂಜೆ 5 ತನಕ ಹಲವು ಬಗೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಉಚಿತವಾಗಿ ತಪಾಸಣೆಯನ್ನು ಇಲ್ಲಿನ ಪರ್ಲಡ್ಕ ಜಂಕ್ಷನ್ ಬಳಿಯಿರುವ ಹರ್ಷ ಆಯುರ್ವೇದಿಕ್ ಸೆಂಟರ್ ಇಲ್ಲಿ ಏರ್ಪಡಿಸಲಾಗಿದೆ.
ಬಿಪಿ ಮತ್ತು ಶುಗರ್ ಸಮಸ್ಯೆ ,ಎಕ್ಸಿಮೋ ,ಸೋರಿಯಾಸಿಸ್ ,ಕಿಡ್ನಿ ಸ್ಟೋನ್ ,ಲಿವರ್ ಸ್ಟೋನ್ ,ಕಾಮಾಲೆ ,ಕೂದಲ ಸಮಸ್ಯೆ ,ವೆರಿಕೋಸ್ ವೆನ್ ,ಕೊಲೆಸ್ಟ್ರಲ್ ,ಮೈಕೈ ನೋವು , ಮೂತ್ರ ನಂಜು ,ಯೂರಿಕ್ ಆ್ಯಸಿಡ್ ,ಅಸ್ತಮಾ ,ಪರ್ಕಿನ್ಸನ್ ,ಪ್ಯಾರಲೈಸ್ ಮತ್ತು ಪೈಲ್ಸ್ ಸಹಿತ ಹಲವಾರು ಸಮಸ್ಯೆಗಳಿಗೆ ಉಚಿತ ತಪಾಸಣೆ ನಡೆಯಲಿದೆ.ಇಷ್ಟೇಯಲ್ಲದೇ ಪಂಚಕರ್ಮ ಚಿಕಿತ್ಸೆಯ ಜೊತೆಗೆ ಕುತ್ತಿಗೆ ಮತ್ತು ಬೆನ್ನು ನೋವಿನ ತೊಂದರೆ , ಡಿಸ್ಕ್ ಸಮಸ್ಯೆ , ಎಲುಬು ಮತ್ತು ಕೀಲು ಸಮಸ್ಯೆಗಳಿಗೆ ನುರಿತ ತಂಡದಿಂದ ಪರಿಹಾರ ಸಿಗಲಿದ್ದು ,ಫೂಟ್ ಪಲ್ಸ್ ಥೆರಪಿ ಮೂಲಕವು ಚಿಕಿತ್ಸೆ ಲಭ್ಯವಿದೆಯೆಂದುಸ್ಥೆ ಪ್ರಕಟಣೆ ತಿಳಿಸಿದೆ. ಅಧಿಕ ವಿವರಣೆಗಾಗಿ ಮೊಬೈಲ್ ಸಂಖ್ಯೆ -9741379326. ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು.