ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ನ ಸ್ವಚ್ಛ ವಾಹಿನಿಯಲ್ಲಿ ಸೇವೆ ಮಾಡುತ್ತಿರುವ ಸ್ವಚ್ಛತಾ ಸೇನಾನಿಗಳಿಗೆ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು ಗ್ಲೌಸ್, ಹ್ಯಾಟ್, ಮಾಸ್ಕ್ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಿದರು. ಗ್ರಾಪಂನ ಸಂಜೀವಿನಿ ಒಕ್ಕೂಟದವರು ಒಣ ಕಸ ಸಂಗ್ರಹಣೆಯಲ್ಲಿ ಉತ್ತಮ ಸೇವೆ ಮಾಡುತ್ತಿದ್ದು ಸ್ವಚ್ಛ ವಾಹಿನಿಯ ಮೂಲಕ ಗ್ರಾಮದ ಅಂಗಡಿಮುಂಗಟ್ಟು ಸೇರಿದಂತೆ ಮನೆಮನೆಗಳಿಂದ ಕಸ ಸಂಗ್ರಹಣೆ ಮಾಡುವ ಮೂಲಕ ಸ್ವಚ್ಛ ಗ್ರಾಮಕ್ಕಾಗಿ ಸೇವೆ ಮಾಡುತ್ತಿದ್ದಾರೆ ಎಂದ ಅಶ್ರಫ್ ಉಜಿರೋಡಿಯವರು, ಸ್ವಚ್ಛತಾ ಸೇನಾನಿಗಳಾದ ಕವಿತಾ ಪರ್ಪುಂಜ, ಕಮಲಾಕ್ಷಿ ಬೊಳ್ಳಾಡಿ, ಕವಿತಾ ಕುಂಬ್ರ ಅವರನ್ನು ಅಭಿನಂದಿಸಿ ಅವರ ಬೇಡಿಕೆಗಳನ್ನು ಆಲಿಸಿ, ಗ್ರಾಮಸ್ಥರು, ಅಂಗಡಿ ವಾಣಿಜ್ಯ ಸಂಕೀರ್ಣ ಮಾಲಕರು ಸ್ವಚ್ಛ ವಾಹಿನಿಯ ಸ್ವಚ್ಛತಾ ಸೇನಾನಿಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ತಮ್ಮ ಅಂಗಡಿ, ಮನೆಗಳಲ್ಲಿ ಉತ್ಪತ್ತಿಯಾದ ಒಣ ಕಸವನ್ನು ನೀಡುವುದರೊಂದಿಗೆ ತಿಂಗಳ ಶುಲ್ಕವನ್ನು ಸಹ ಪಾವತಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ ಬೊಳ್ಳಾಡಿ,ವಿನೋದ್ ಶೆಟ್ಟಿ ಮುಡಾಲ, ಚಿತ್ರಾ, ಶಾರದಾ, ಸುಂದರಿ ಹಾಗೂ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಉಪಸ್ಥಿತರಿದ್ದರು.