ಬೆಟ್ಟಂಪಾಡಿ ಗ್ರಾ.ಪಂ.ನಲ್ಲಿ ಕ್ರೀಡಾ ಕಾರಂಜಿಯ ಕ್ರೀಡಾ ಜ್ಯೋತಿಗೆ ಅದ್ದೂರಿ ಸ್ವಾಗತ

0

ನಿಡ್ಪಳ್ಳಿ; ಪುತ್ತೂರು ಕೊಂಬೆಟ್ಟು ಕ್ರೀಡಾಂಗಣದಲ್ಲಿ ಡಿ.2 ರಿಂದ 4 ರವರೆಗೆ ನಡೆಯುವ ರಾಜ್ಯಮಟ್ಟದ 17 ರ ವಯೋಮಾನದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾ ಕೂಟ ಕ್ರೀಡಾ ಕಾರಂಜಿಯ ಪೂರ್ವಭಾವಿಯಾಗಿ ತಾಲೂಕಿನಾದ್ಯಂತ ತೆರಳುತ್ತಿರುವ  ಕ್ರೀಡಾ ಜ್ಯೋತಿಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನಲ್ಲಿ ಡಿ.2 ರಂದು ಅದ್ದೂರಿ  ಸ್ವಾಗತ ನೀಡಲಾಯಿತು.

 ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಹೂಹಾರ ಹಾಕಿ ರಥವನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಮಹೇಶ್. ಕೆ, ಸದಸ್ಯರಾದ ಪ್ರಕಾಶ್ ರೈ, ಉಮಾವತಿ,ಪಾರ್ವತಿ.ಎಂ,  ಪಿಡಿಒ ಸೌಮ್ಯ. ಎಸ್, ಕಾರ್ಯದರ್ಶಿ ಬಾಬು ನಾಯ್ಕ ಹಾಗೂ ಸಿಬ್ಬಂದಿಗಳು, ನವೋದಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ,ಶಿಕ್ಷಕಿ ಭುವನೇಶ್ವರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ ರೈ ಗಿಳಿಯಾಲು, ಸುಧೀರ್ ರೈ ಪಾಣಾಜೆ, ಮಾಧವ ಗೌಡ ಪೆರಿಯತ್ತೊಡಿ, ಬಾಲಕೃಷ್ಣ ಸವಣೂರು ಮತ್ತು ಸಾಮಾಜಿಕ ಮುಂದಾಳು ನೇಮಾಕ್ಷ ಸುವರ್ಣ ಮತ್ತೀತರರು ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಸಿರು ಹೊರೆಕಾಣಿಕೆಯೊಂದಿಗೆ ರಥವನ್ನು ಬೀಳ್ಕೊಡಲಾಯಿತು.

LEAVE A REPLY

Please enter your comment!
Please enter your name here