





ಪುತ್ತೂರು: ಲಾರಿ ಬಿಡಿ ಭಾಗಗಳಿಗೆ ಮತ್ತು ಡಿಸೇಲ್ ಬೆಲೆ ಏರಿಕೆ ಕಡಿಮೆಯಾಗದೆ ಇರುವುದರ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೆಂಪು ಕಲ್ಲು ಸಾಗಾಟದ ಲಾರಿ ಚಾಲಕ ಮಾಲಕರು ಡಿ. 5 ರಿಂದ 12ರ ತನಕ ಅನಿರ್ಧಿಷ್ಟಾವಧಿ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಜೈ ಭಾರತ್ ಲಾರಿ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ತಿಳಿಸಿದ್ದಾರೆ.


ಲಾರಿ ಬಿಡಿ ಭಾಗಗಳಿಗೆ ಮತ್ತು ಡಿಸೇಲ್ ಬೆಲೆ ಏರಿಕೆ ಕಡಿಮೆಯಾಗದೇ ಇರುವುದು, ಕೆಂಪು ಕಲ್ಲು ಸಾಗಾಟದಲ್ಲಿ ಬ್ರೋಕರ್ಗಳ ಹಾವಳಿ ಹಾಗು ತೀರಾ ಕಡಿಮೆ ದರದಲ್ಲಿ ಕೆಂಪುಕಲ್ಲು ಇಳಿಸುವುದು ಕಂಡುಬಂದಿರುವುದರಿಂದ ಎಲ್ಲಾ ಕೆಂಪು ಕಲ್ಲು ಸಾಗಾಟದ ಲಾರಿಯವರಿಗೆ ಬಹಳ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಅನಿರ್ಧಿಷ್ಟಾವಧಿ ಕಾಲ ಸ್ಥಗಿತಗೊಳಿಸುವಂತೆ ಕರೆ ನೀಡಿರುತ್ತೇವೆ. ಆದ್ದರಿಂದ ಎಲ್ಲಾ ಲಾರಿ ಮಾಲಕರು ಚಾಲಕರು ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿಯನ್ನು ಮಾಡುತ್ತಿದ್ದೇವೆಂದು ಧನ್ಯಕುಮಾರ್ ಬೆಳಂದೂರು ತಿಳಿಸಿದ್ದಾರೆ.











